October 15, 2011

PETROL TIPS - info!!

With  Petrol expected to reach £2 per liter by end of  2011 these tips that I received from a friend  might come in  handy.   
     
 TIPS  ON PUMPING PETROL 
I  don't know what you guys are paying for  petrol.... I am paying  up to £1.35 to £1.50 per liter. My line of work  is in petroleum for about 31 years now, so here  are some tricks to get more of your money's  worth for every Liter: 
> Here  at the Shell Pipeline where I work ,  we deliver about 4 million liters in a 24-hour  period .. One day is diesel the  next day is jet fuel, and petrol, regular and  premium grades. We have 34-storage tanks here  with a total capacity of 16,800,000  Liters. 
> Only  buy or fill up your car or truck in the early  morning when the ground temperature is still  cold. Remember  that all service stations have their storage  tanks buried below ground. The colder the ground  the more dense the petrol, when it gets warmer  petrol expands, so buying in the afternoon or in  the evening....your liter is not exactly a  liter. In the petroleum business, the specific  gravity and the temperature of the petrol,  diesel and jet fuel, ethanol and other petroleum  products plays an important  role.
>  

>
> A  1-degree rise in temperature is a big deal for  this business. But the service stations do not  have temperature compensation at the  pumps.
>  

>
> When  you're filling up do not squeeze the trigger of  the nozzle to a fast mode  If you look you will see that the trigger has  three (3) stages: low, middle, and high. You  should be pumping on low mode, thereby  minimizing the vapours that are created while  you are pumping. All hoses at the pump have a  vapour return. If you are pumping on the fast  rate, some of the liquid that goes to your tank  becomes vapour. Those vapours are being sucked  up and back into the underground storage tank so  you're getting less worth for your  money. 

 One  of the most important tips is to fill up when  your Petrol tank is HALF FULL. The reason  for this is the more Petrol you have in your  tank the less air occupying its empty space.  petrol evaporates faster than you can imagine.  petrol storage tanks have an internal floating  roof. This roof serves as zero clearance between  the Petrol and the atmosphere, so it minimizes  the evaporation. Unlike service stations, here  where I work, every truck that we load is  temperature compensated so that every liter is  actually the exact amount. 

  Another  reminder, if there is a petrol truck pumping  into the storage tanks when you stop to buy  Petrol, DO NOT fill up; most likely  the petrol is being stirred up as the Petrol is  being delivered, and you might pick up some of  the dirt that normally settles on the  bottom.

August 25, 2011

ಅಣ್ಣಾಗೆ ನಿಜವಾದ ಬೆಂಬಲ ನೀಡಿ

ನಾವು ಅಣ್ಣಾ ಹಜಾರೆಯವರನ್ನು ಬೆಂಬಲಿಸುತ್ತಿದ್ದೇವೆ ನಿಜ. ಆದರೆ ಕೇವಲ ಜನ ಲೋಕಪಾಲ ಮಸೂದೆಯ ಜಾರಿಯಿಂದ ಭ್ರಷ್ಟಾಚಾರದ ನಿಯಂತ್ರಣ ಸಾದ್ಧ್ಯವೇ?
 ಕರ್ನಾಟಕದ ಬಲಿಷ್ಠ ಲೋಕಾಯುಕ್ತವನ್ನೇ ತೆಗೆದುಕೊಳ್ಳಿ. ಕರ್ನಾಟಕ ಭ್ರಷ್ಟಾಚಾರ ಮುಕ್ತ ರಾಜ್ಯವಾಗಿದೆಯೇ? (ಭ್ರಷ್ಟಾಚಾರದಲ್ಲಿ ಬಹುಶಃ ಮೊದಲನೆ ಇಲ್ಲವೆ ಎರಡನೆ ಸ್ಥಾನದಲ್ಲಿದೆ).
ಮಸೂದೆಗಳಿಂದ, ಕಾನೂನುಗಳಿಂದ ಭ್ರಷ್ಟಾಚಾರ ನಿಯಂತ್ರಣ ಅಸಾಧ್ಯ. ಕಾನೂನುಗಳಿಂದ ಅಪರಾಧ ನಿಯಂತ್ರಣವೇ ಅಸಾಧ್ಯ ಆಗಿರುವಾಗ ಭ್ರಷ್ಟಾಚಾರ ನಿಯಂತ್ರಣ ಕನಸಿನ ಮಾತು.
ಸತ್ಯಾಗ್ರಹ, ಚಳುವಳಿಗಳ ಇತಿಹಾಸ ಗಮನಿಸಿದರೆ ಒಂದು ಮಾತಂತೂ ಸತ್ಯ. ಯಾವ ಚಳುವಳಿಯೂ ಜನರ ಸ್ವಭಾವವನ್ನು ಬದಲಿಸುವಲ್ಲಿ ಯಶಸ್ವಿಯಾಗಿಲ್ಲ. ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ನಡೆಸಿದರೂ ನಮಗಿನ್ನೂ ಪೂರ್ಣ  ಪ್ರಮಾಣದ ಸ್ವಾತಂತ್ರ್ಯ ಮರೀಚಿಕೆಯಾಗಿಯೇ ಉಳಿದಿದೆ. ಸತ್ಯ, ಅಹಿಂಸೆ, ಅಪರಿಗ್ರಹದಂತಹ ತತ್ವಗಳನ್ನು ಅವರ ಸಾವಿನ ಮೊದಲೇ ನಾವು ಮರೆತಾಯಿತು. ಜೆ.ಪಿ.ಯವರ ಚಳುವಳಿಯೂ ಜನತಾ ಪಕ್ಷದ ಅಧಿಕಾರದ (ತುರ್ತು ಪರಿಸ್ಥಿತಿಯ ಬಳಿಕದ ೨ ವರ್ಷದ ಆಳ್ವಿಕೆ) ನಂತರ ಮಹತ್ವ ಕಳೆದುಕೊಂಡು ಮೂಲೆಗುಂಪಾಯಿತು.
ಇನ್ನು ಅಣ್ಣಾ ಚಳುವಳಿಗೂ ಇದೆ ಪರಿಸ್ಥಿತಿ ಬರಲಿದೆ. ಭ್ರಷ್ಟಾಚಾರ ನಿಲ್ಲಿಸಬೇಕೆ? ಮೊದಲು ನಾವು ಬದಲಾಗೋಣ. ಭ್ರಷ್ಟಾಚಾರದ ಎಂಜಲು ಕಾಸಿಗೆ ನಾವು ಕೈಯೊಡ್ಡದಿರೋಣ. ಲಂಚ ಕೊಡುವುದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ ಎನ್ನುವ ಸಂಕಲ್ಪ ಮಾಡೋಣ. ಆಗ ಮಾತ್ರ ನಾವು ಅಣ್ಣಾಗೆ ನಿಜವಾದ ಬೆಂಬಲ ನೀಡಿದಂತೆ. ಜೈ ಹಿಂದ್.

June 23, 2011

I hope this is very useful info to all..........

Breathing Therapy 

FunFunky.Com

The nose has a left and a right side; we use both to inhale and exhale.

Actually they are different; you would be able to feel the difference.
The right side represents the sun, left side represents the moon.
During a headache, try to close your right nose and use your left nose to breathe.

In about 5 mins, your headache will go? 

  
If you feel tired, just reverse, close your left nose and breathe through your right nose.
After a while, you will feel your mind is refreshed.

Right side belongs to 'hot', so it gets heated up easily, left side belongs to 'cold'.

Most females breathe with their left noses, so they get "cooled off" faster.

Most of the guys breathe with their right noses, they get worked up.

Do you notice the moment we wake up, which side breathes faster? Left or right? ?

If left is faster, you will feel tired.
So, close your left nose and use your right nose for breathing, you will get refreshed quickly.

This can be taught to kids, but it is more effective when practiced by adults.

My friend used to have bad headaches and was always visiting the doctor.

There was this period when he suffered headache literally every night, unable to study. 


He took painkillers, did not work.

He decided to try out the breathing therapy here: closed his right nose and breathed through his left nose.

In less than a week, his headaches were gone! He continued the exercise for one month.

This alternative natural therapy without medication is something that he has experienced.

So, why not give it a try?

June 6, 2011

ನಾವಿನ್ನೂ ಬ್ರಿಟಿಷರ ಆಳ್ವಿಕೆಯಲ್ಲಿದ್ದೇವೆಯೇ?

ಸ್ವತಂತ್ರ, ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುವ  ದೇಶದಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವೇ! ಜೂನ್ ೪ ರ ಘಟನೆ ನಾವೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ. ಪ್ರಜೆಗಳ ಮೂಲಭೂತ ಹಕ್ಕುಗಳ ಕಗ್ಗೊಲೆಯಾಗಿದೆ. ಗಾಂಧಿಜಿ ಹೇಳಿಕೊಟ್ಟ ಸತ್ಯಾಗ್ರಹದಂತಹ ಅಸ್ತ್ರ ಬೆಲೆ ಕಳೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದಂತಾಗಿದೆ. ಪ್ರಜೆಗಳ ದನಿಯನ್ನು ಹತ್ತಿಕ್ಕಲು ಹೊಸ ವಿಧಾನವನ್ನು ಸರಕಾರ ಹೇಳಿಕೊಟ್ಟಿದೆ. ಬಾಬಾ ರಾಮದೇವ್  ಅವರ ಅಹಿಸಾತ್ಮಕ ಪ್ರತಿಭಟನೆಗೆ ಹಿಂಸಾತ್ಮಕ ಉತ್ತರ ನೀಡಿ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಏಪ್ರಿಲ್ ೧೨ ರಂದು ನಾನು ಬರೆದ ಲೇಖನ "ಇನ್ನೊಂದು ಸಮರಕ್ಕೆ ಸಿದ್ದರಾಗಿ " ಯ ಸದಾಶಯದಂತೆ ಬಾಬಾ ರಾಮದೇವ್ ಅವರು ಸತ್ಯಾಗ್ರಹಕ್ಕೆ ಕುಳಿತದ್ದು ಸಂತೋಷದ ವಿಚಾರವಾಗಿರುತ್ತದೆ. ಲೋಕಪಾಲದಂತಹ ಬಹು ಆಯಾಮದ ಸಮಸ್ಯೆಯನ್ನು ಎದುರಿಸುವ ಬದಲು, "ಕಪ್ಪು ಹಣ" ದಂತಹ ಒಂದೇ ಸಮಸ್ಯೆಯನ್ನು ಎದುರಿಸಿ ಬಾಬಾ ಯಶಸ್ಸನ್ನು ಪಡೆಯುವ ಹಂತದಲ್ಲಿರುವಾಗಲೇ ಹೀಗೆ ಸತ್ಯಾಗ್ರಹವನ್ನು ಹತ್ತಿಕ್ಕಿದ್ದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಸರಕಾರದ ಸರ್ವಾಧೀಕಾರದ ಧೋರಣೆ ಎಂದಿಗೂ ಸಲ್ಲ. ಬುದ್ಧಿಜೀವಿಗಳೆನಿಸಿಕೊಂಡವರಿಗೆ ಈ ದೌರ್ಜನ್ಯ ಕಣ್ಣಿಗೆ ಕಾಣುವುದಿಲ್ಲವೇ? ಒಂದು ಧರ್ಮದವರಿಗೆ ಮಾತ್ರ ಮಾನವ ಹಕ್ಕುಗಳಿರುವುದೆ? ಇತರ ಧರ್ಮದವರು ಮಾನವರಲ್ಲವೇ?  ಬುದ್ಧಿವಂತರ ಬ್ಲಾಗ್ "ಸಂಪಾದಕೀಯ" ಕ್ಕೆ ಬುದ್ಧಿಜೀವಿಗಳ ಧಾಳಿ ನಡೆದಿದೆಯೇ?
ನಾವು ಸ್ವತಂತ್ರ ಭಾರತದಲ್ಲಿದ್ದೇವೆ ಎಂದು ನಿರೂಪಿಸಲು ಯಾರಾದರೂ, ಏನಾದರೂ ಸಾಕ್ಷ್ಯ ಒದಗಿಸಿ.
"ಸೊ ಮೆಸೇ ಅಸ್ಸಿ ಬೆ ಇಮಾನ್, ಫಿರ್ ಭಿ ಮೇರಾ ಭಾರತ್ ಮಹಾನ್"

April 11, 2011

" ಇನ್ನೊಂದು ಸಮರಕ್ಕೆ ಸಿದ್ಧರಾಗಿ"

ಅಣ್ಣ ಹಜಾರೆಯವರ  ಉಪವಾಸವೇನೋ ಮುಗಿಯಿತು. ರಂಗೋಲೆಯ ಕೆಳಗೆ ನುಸುಳುವ ಬುದ್ಧಿ ಉಳ್ಳ ರಾಜಕಾರಣಿಗಳು ಎಂತಹ ಕಾನೂನು ತಯಾರಿಸುತ್ತರೋ ಕಾದುನೋಡಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಲೋಕಾಯುಕ್ತದಂತಹ ಸಂಸ್ಥೆಯಿಂದ ಆಗುತ್ತಿರುವ ಭ್ರಷ್ಟಾಚಾರಿಗಳ ಬೇಟೆ ಅವರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿರುವುದು ಸರ್ವವೇದ್ಯ. ಅಲ್ಲದೆ ಇಂತಹ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವುದೂ ಅನುಮಾನ. ಇಂತಹ ಪರಿಸ್ತಿತಿಯಲ್ಲಿ ಇನ್ನೊದು ಹೋರಾಟದ ಅಗತ್ಯ ಇದೆ.
ಭಾರತದ ರಾಜಕಾರಣಿಗಳ ಕೋಟಿ ಕೋಟಿ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಕೊಲ್ಲೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಹಣವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿದರೆ ಭಾರತ ತನ್ನೆಲ್ಲ ಸಾಲದಿಂದ ಮುಕ್ತವಾಗಿ, ಹಣ ದುಬ್ಬರ, ಬಡತನ, ಮುಂತಾದ ತನ್ನೆಲ್ಲ ಕಷ್ಟ ಕೋಟಲೆಗಳಿಂದ ಹೊರಬರಲು ಸಾಧ್ಯ. ಇದಕ್ಕಾಗಿ ಅಣ್ಣ ಹಜಾರೆ ಅವರನ್ನು ಈ ಉದ್ದೇಶಕ್ಕಾಗಿ ಪುನಃ ಉಪವಾಸ ಕೂರಲು ಹೇಳುವುದು ಸ್ವಾರ್ಥ ಎನಿಸಬಹುದು. ಈ ವಿಚಾರವನ್ನೇ ತನ್ನ ಚುನಾವಣ ಪ್ರಾಣಾಳಿಕೆ ಮಾಡಿಕೊಂಡಿರುವ ಭಾ.ಜ.ಪ. ದಿಂದ ಇದನ್ನು ರಾಜಕೀಯಗೊಳಿಸಬಾರದು. ಈ ವಿಚಾರವನ್ನೇ ಪದೇ ಪದೇ ಹೇಳುತ್ತಿದ್ದ ಶ್ರೀ ರಾಜೀವ ದೀಕ್ಷಿತರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಭಾಷಣದ ಕನ್ನಡ ರೂಪ ಹೇಳುತ್ತಿರುವ "ಜಾಗೋ ಭಾರತ್ " ನ ಸೂಲಿಬೆಲೆ (ಮಿಥುನ್) ಚಕ್ರವರ್ತಿ ಅಥವಾ "ಭಾರತ್ ಸ್ವಾಭಿಮಾನ್" ನ   ಬಾಬಾ ರಾಮದೇವ್ ಅವರು ಉಪವಾಸ ಸತ್ಯಾಗ್ರಹ ಕೈಗೊಂಡು ಈ ಕಾರ್ಯಕ್ಕೆ ಮುಂದಾಗಲಿ ಎಂದು ನಮ್ಮ ಆಶಯ. ಕೇವೆಲ ಭಾಷಣಗಳಿಂದ ಏನೂ ಸಾಧ್ಯವಿಲ್ಲ. ಅಣ್ಣಾ ತೋರಿಸಿಕೊಟ್ಟ ಹಾದಿಯಲ್ಲಿ ಇವರು ಮುನ್ನಡೆಯಲಿ, ಭಾರತದ ಯುವಶಕ್ತಿ ಖಂಡಿತ ಅಭೂತಪೂರ್ವ ಬೆಂಬಲ ನೀಡಲಿದೆ.
ಜೈ ಭಾರತ ಮಾತೆ.