March 23, 2015

"ಗಧಾಧರ ಪೀಠ"

"ಗಯಾ" ದಂತಹ ಪೌರಾಣಿಕ ಸ್ಥಳಗಳಲ್ಲಿ ಇರುವಂತಹ "ಗಧಾಧರ ಪೀಠ" ವನ್ನು ಪಾವಂಜೆಯ ಪುಣ್ಯಭೂಮಿಯಲ್ಲಿ ದಿನಾಂಕ ೨೩-೩-೨೦೧೫ ರಂದು ನಮ್ಮ ಗುರುಗಳಾದಂತಹ ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ  ಪ್ರಿತಿಷ್ಠಾಪಿಸಲಾಯಿತು 


ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರೂ ಮಾಡಲೇಬೇಕಾದ ಕರ್ತವ್ಯಗಳಲ್ಲಿ ವೇದಾಧ್ಯಯನವೂ ಒಂದು. ಆದರೆ ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಕೆಲಸ ಕಾರ್ಯಗಳಲ್ಲಿ ನಿರತನಾಗಿರುವುದರಿಂದ ವೇದಾಧ್ಯಯನ ಮಾಡಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ವೇದಾಧ್ಯಯನ ನಿರತ ಕೆಲವೇ ಮಂದಿಯ ಪುಣ್ಯಫಲವನ್ನು ಸಾರ್ವತ್ರಿಕವಾಗಿ ಹಂಚುವ ವ್ಯವಸ್ಥೆಯನ್ನು ರೂಪಿಸಲಾಯಿತು. ಈ ಪ್ರಕಾರವಾಗಿ "ಗಧಾಧರ"ನ ಉಪಾಸನೆಯನ್ನು ಬಳಕೆಗೆ ತರಲಾಯಿತು. ವೇದಾಧ್ಯಯನಶೀಲರ ಪುಣ್ಯದ ಆರನೆಯ ಒಂದು ಭಾಗ ಮಾತ್ರ ಅವರಲ್ಲಿ ಸಂಚಯನಗೊಂಡರೆ ಉಳಿದ ಭಾಗಗಳು ರಾಜಾದಾಯ ಮುಂತಾದ ಭಾಗಗಳಾಗಿ ಹಂಚಿಕೆಯಾಗುತ್ತದೆ. 

ಗಧಾಧರನ ಉಪಾಸನೆ ಎಂದರೆ ಪಿತೃಯಜ್ಞ. ಅಗ್ನಿ ಶಾಸ್ತ, ದೇವಪಿತೃ ತರ್ಪಣ, ವಿಶ್ವೇದೇವತಾ ಆರಾಧನೆ, ಪಿತೃ ತರ್ಪಣ (ಶ್ರಾದ್ಧ) ಗಳಿಂದ  ವೇದಾಧ್ಯಯನದ ಪುಣ್ಯವನ್ನು ಪಡೆಯಲು ಸಾಧ್ಯ. ಗಧಾಧರ ಪೀಠದಲ್ಲಿ ಶ್ರಾದ್ಧ ಕರ್ಮವನ್ನು ಮಾಡುವುದರಿಂದ ಪಿತೃಗಳಿಗೆ ಸದ್ಗತಿಯನ್ನು ನೀಡಲು ಸಾಧ್ಯ.