June 11, 2015

ತ್ವಚೆಯ ಸೌಂದರ್ಯದ ಮೇಲೆ ಸ್ಮಾರ್ಟ್ ಫೋನಿನ ಪರಿಣಾಮ

ಸ್ಮಾರ್ಟ್ ಫೋನಿನ ಬಳಕೆಯಿಂದ ತಲೆನೋವು, ಕತ್ತುನೋವು, ಭುಜನೋವು ಹಾಗೂ ಬೆನ್ನುನೋವು ಬರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವುದು ವಿಚಾರ. ಈಗ ಇದಕ್ಕೆ ಕಾಸ್ಮೆಟಿಕ್ ಸಮಸ್ಯೆಯೂ ಸೇರಿಕೊಂಡಿರುವುದು ಆತಂಕಕಾರಿ ವಿಷಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದಿನಕ್ಕೆ ಗಂಟೆಗೂ ಅಧಿಕ ಸಮಯವನ್ನು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಗಳಲ್ಲಿ ಕಳೆಯುವುದು ಸಾಮಾನ್ಯವೆನಿಸಿದೆ. ಇದರಿಂದ ಕುತ್ತಿಗೆಯ ತ್ವಚೆ, ಕಾಲರ್ ಬೋನ್ ಹಾಗೂ ಗಲ್ಲದ ತ್ವಚೆಯು ಜೋತಾಡುತ್ತದೆ. ಇದರ ಪರಿಣಾಮವಾಗಿ ಅಕಾಲಿಕವಾದ ಸುಕ್ಕುಗಳು ಉಂಟಾಗುತ್ತವೆ





 ಹಿಂದೆ ಇಳಿ ಪ್ರಾಯದಲ್ಲಿ ಜೋತಾಡುತ್ತಿದ್ದ ಮುಖದ ಚರ್ಮವು ಇಂದು ಮುವತ್ತರ ಹರೆಯದಲ್ಲೇ ಸಮಸ್ಯೆಯನ್ನೆದುರಿಸುತ್ತಿವೆ. ಮುಖದ ಸ್ನಾಯುಗಳ ಅನಿಯಂತ್ರಿತ ಚಲನೆಗಳೇ ಇದಕ್ಕೆ ಪ್ರಮುಖ ಕಾರಣ. ಉದಾಹರಣೆಗೆ, ಹೇಗೆ ಯಾವಾಗಲೂ ಮುಖ ಗಂಟಿಕ್ಕಿಕೊಂಡಿರುವುದರಿಂದ ಹಣೆಯಲ್ಲಿ ನೆರಿಗೆಗಳು ಮೂಡುವುದಕ್ಕೆ ಕಾರಣವಾಗುವುದೋ ಹಾಗೆಯೇ ನಿರಂತರವಾಗಿ ತಲೆ ಕೆಳಗೆಮಾಡಿಕೊಂಡು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಗಳಲ್ಲಿ ಮಗ್ನರಾಗಿರುವುದರಿಂದ ತ್ವಚೆಯಲ್ಲಿ ನೆರಿಗೆಗಳು ಉಂಟಾಗುತ್ತವೆ ಮತ್ತು ಜೋತಾಡಲಾರಂಭಿಸುತ್ತದೆ ಎಂದು ಚರ್ಮ ರೋಗ ತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ ಕುತ್ತಿಗೆಯನ್ನು ಬಗ್ಗಿಸಿ ನಿರಂತರವಾಗಿ ಕೆಳಗೆ ನೋಡುವುದರಿಂದ ಅದರ ಸ್ನಾಯುಗಳಿಗೆ ಆಯಾಸ ಉಂಟಾಗಿ ಮೃದು ಅಂಗಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದು ಕೂಡ ಅಕಾಲಿಕ ಸುಕ್ಕುಗಳಿಗೆ ಕಾರಣವಾಗುತ್ತದೆ. ಹೀಗಾಗಿ ಸೌಂದರ್ಯಪ್ರಜ್ಞೆಯುಳ್ಳ ಮಹಿಳೆಯರು ಸ್ಮಾರ್ಟ್ ಫೋನಿನಿಂದ ಆದಷ್ಟು ದೂರ ಇರುವುದು ಒಳಿತು.


(
ಕೃಪೆ: Times of India)

No comments:

Post a Comment