May 22, 2015
May 19, 2015
ದತ್ತು ಕಾನೂನನ್ನು ಸಡಿಲಿಸಿ
ಭಾರತದಲ್ಲಿ "ದತ್ತು ಕಾನೂನು"ಗಳು ಎಷ್ಟು ಕ್ಲಿಷ್ಟವಾಗಿವೆ ಮತ್ತು ಗೋಜಲಿನಿಂದ ಕೂಡಿವೆ ಎಂದರೆ ಮಗುವನ್ನು ದತ್ತು ಪಡೆಯಬೇಕೆಂಬ ಆಸೆ ಇರುವ ಸಾವಿರಾರು ಜನರ ಕೈಗಳನ್ನು ಇವು ಕಟ್ಟಿ ಹಾಕಿವೆ. ಇತ್ತೀಚಿಗೆ ನಾನೊಂದು ಅನಾಥಾಶ್ರ.ಮಕ್ಕೆ ಭೇಟಿ ನೀಡಿದ್ದೆ
ಅಲ್ಲಿನ ಮುಖ್ಯಸ್ಥರ ಮಾತಿನಲ್ಲಿ ಹೇಳುವುದಾದರೆ "ಈ ಕಾನೂನುಗಳನ್ನು ನೋಡಿ ಮಕ್ಕಳನ್ನು ದತ್ತು ಪಡೆಯಲು ಬಂದವರೂ ಹಿಂದೆ ಹೋಗುತ್ತಾರೆ". ಒಂದು ಉದಾಹರಣೆ ಹೇಳುವುದಾದರೆ, ದತ್ತು ಪಡೆಯುವವನು ತನ್ನ ಆಸ್ತಿಯ ಅರ್ಧ ಭಾಗ ಮಗುವಿನ ಹೆಸರಲ್ಲಿ ಬರೆಯಬೇಕಂತೆ! ಮಗುವನ್ನು ಹೊತ್ತು, ಸಾಕಿ, ಸಲಹಿ, ಶಿಕ್ಷಣ ನೀಡಿ ಅವನ ಕಾಲ ಮೇಲೆ ನಿಲ್ಲುವಂತೆ ಮಾಡುವುದು ತಂದೆ ತಾಯಿಯರ ಕರ್ತವ್ಯವಲ್ಲವೇ. ಇಲ್ಲಿ ಆಸ್ತಿ ಅಂತಸ್ತು ಗಳನ್ನು ಎಳೆದು ತರುವುದು ಸರ್ವಥಾ ಸಾಧುವಲ್ಲ. ಹೀಗೇ ಇದರಂತಹ ಇಪ್ಪತ್ತೈದು ಕಾಯಿದೆಗಳನ್ನು ಈ ದತ್ತು ಕಾನೂನಿನೊಳಗೆ ತೂರಲಾಗಿದೆ. ಇವುಗಳಿಂದ ರೋಸಿಹೊದವರಿಗಾಗಿ "ಸ್ಪೂರ್ತಿಧಾಮ" ಎಂಬ ಸಂಸ್ಥೆಯ ಪರಿಚಯವನ್ನು ಈ ಕೆಳಗೆ ನೀಡುತ್ತಿದ್ದೇನೆ.
ನಿಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ (ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ ಇತ್ಯಾದಿ) ಇಲ್ಲಿನ ಮಕ್ಕಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬಹುದು. ವಿವರಗಳು ಈ ಕೆಳಗಿನಂತಿವೆ.
ಈ ಸಂಸ್ಥೆಯ ಪೂರ್ಣ ವಿವರಗಳು ಈ ಕೆಳಗಿನ ಅಂತರ್ಜಾಲ ಪುಟಗಳಲ್ಲಿವೆ.
http://spoorthi.org.in
https://www.facebook.com/spoorthidhama
"ಸೇವಾಹಿ ಪರಮೋ ಧರ್ಮಃ"
April 18, 2015
ಕರಾವಳಿ ಜನರೇಕೆ ಬುದ್ಧಿವಂತರು?
||ಶ್ರೀ ಗುರುಭ್ಯೋ ನಮಃ||
ಪಶ್ಚಿಮ ಕರಾವಳಿಯ ಪ್ರದೇಶಗಳು ಬುದ್ಧಿವಂತರ ನಾಡು ಎಂದು ಕರೆದುಕೊಳ್ಳುವ ಹಿಂದಿನ ಕಾರಣಗಳ ಬಗ್ಗೆ ನನ್ನ ಸೀಮಿತ ಜ್ಞಾನದಿಂದ ಚಿಂತಿಸಿದಾಗ ದೊರೆತ ಉತ್ತರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇದರ ಬಗ್ಗೆ ಪ್ರಾಜ್ಞರು ಹೆಚ್ಚಿನ ಬೆಳಕು ಚೆಲ್ಲಬೇಕಾಗಿಯೂ ಕೋರುತ್ತೇನೆ.
೧. ಅತಿಯಾದ ತೆಂಗಿನ ಬಳಕೆ - ಕರಾವಳಿಯ ಜನ ಪ್ರಪಂಚದ ಅತೀ ಹೆಚ್ಚು ತೆಂಗಿನ ಬಳಕೆದಾರರು. ತೆಂಗಿಗೆ "ಕಲ್ಪವೃಕ್ಷ" ಎಂಬುದು ಅನ್ವರ್ಥ ನಾಮ. ತೆಂಗಿನ ಕಾಯಿಯನ್ನು ಗಣೇಶನ ಅಪರಾವತಾರದಂತೆ ಕಾಣಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ದಿನವಹಿ ಆಹಾರದಲ್ಲಿ ಇದನ್ನು ಪ್ರಮುಖವಾಗಿ ಬಳಸುತ್ತಾರೆ. "ಇಂಗು ಮತ್ತು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ" ಎಂಬ ನಾಣ್ಣುಡಿ ಅಡುಗೆಯಲ್ಲಿ ತೆಂಗಿನ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಇನ್ನು "ಕೊಬ್ಬರಿ ಎಣ್ಣೆ" ಹಾಗೂ "ತೆಂಗಿನ ಎಣ್ಣೆ" (ಹಸಿ ತೆಂಗಿನ ಕಾಯಿಯಿಂದ ತಯಾರಿಸಿದ್ದು) ಗಳು ಪ್ರಪಂಚದ ಅತ್ಯುತ್ತಮ ಎಣ್ಣೆಗಳ ಸಾಲಲ್ಲಿ ಪರಿಗಣಿಸಲ್ಪತ್ತಿವೆ. ಶೂನ್ಯ ಶೇಖಡ ಕಾಲೆಸ್ಟಿರೊಲ್ ಇವುಗಳ ಹೆಗ್ಗಳಿಗೆ (ಕಾಲೆಸ್ಟಿರೊಲ್ ಎಂಬ ಭೂತ ಹೆಚ್ಚಾಗಿ ಕಾಡುವುದು ಕಾದ ಎಣ್ಣೆಯನ್ನು ಪುನಃ ಪುನಃ ಕಾಯಿಸುವುದರಿಂದ ಮಾತ್ರ). ಎಳೆನೀರು ಮತ್ತು ಬಾವೆ (ಎಳೆ ತೆಂಗಿನ ಒಳ ಪದರ) ಅಮೃತ ಸಮಾನ. ಇದರಲ್ಲಿನ ಖನಿಜ, ಲವಣ, ಜೀವಸತ್ವ, ಪೋಷಕಾಂಶಗಳು ಜಗತ್ತಿನ ಅತ್ಯುತ್ತಮ ಪೇಯವನ್ನೂ ಹಿಂದಿಕ್ಕಿ ಮೊದಲ ಸಾಲಲ್ಲಿ ನಿಲ್ಲುತ್ತವೆ. ಇನ್ನು ತೆಂಗಿನ ಕಾಯಿಯಿಂದ ತೆಗೆದ ಹಾಲನ್ನು ಅನೇಕ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಸಂಶೋಧನೆಗಳು ಇದರಲ್ಲಿನ ಪೋಷಕಾಂಶಗಳನ್ನು ತಾಯಿಯ ಹಾಲಿಗೆ ಹೊಲಿಸುತ್ತವೆ. ಇನ್ನು ನಮ್ಮಲ್ಲಿ ಎಣ್ಣೆ ತೆಗೆದ ಬಳಿಕ ಉಳಿಯುವ ಹಿಂಡಿಯನ್ನೂ ಖಾದ್ಯವಾಗಿ ಉಪಯೋಗಿಸುತ್ತಾರೆ ಸ್ವಾಮೀ ! ಅಷ್ಟೇ ಏಕೆ, ಸಿಯಾಳದ ಒಳಗಿನ ತೊಗಟೆ (ಕರ್ಕು), ಮೊಳಕೆ, ನೀರಾ ಇತ್ಯಾದಿಗಳನ್ನೂ ಇಷ್ಟಪಟ್ಟು ತಿನ್ನುತ್ತಾರೆ.
ತೆಂಗಿನ ಕಾಯಿಯಲ್ಲಿನ ಪೌಷ್ಟಿಕತೆಯು ಅದರ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಬೇರೆ ಬೇರೆ ಗುಣ-ಸ್ವಭಾವವನ್ನು ಹೊಂದಿರುವುದು ಒಂದು ವಿಶೇಷವಾಗಿದೆ. ಎಳೆನೀರಿನ ಒಳಗಿನ ಎಳೆ ಕಾಯಿ, ಬಲಿತ ತೆಂಗು ಹಾಗೂ ಕೊಬ್ಬರಿ ಹೀಗೆ ಮೂರು ಹಂತಗಳಲ್ಲಿ ಮಾನವ ದೇಹಕ್ಕೆ ಬೇಕಾದ ಸಕಲ ಪೋಷಕಾಂಶಗಳನ್ನೂ ನೀಡುತ್ತದೆ ಈ ಕಲ್ಪವೃಕ್ಷ. ಈ ರೀತಿಯ ಅತಿಯಾದ ತೆಂಗಿನ ಬಳಕೆಯು ಕರಾವಳಿಯಲ್ಲಿ ಮಾತ್ರ ಕಂಡುಬರುವುದು ಅವರ ಬುದ್ಧಿಮತ್ತೆಗೂ ತೆಂಗಿಗೂ ಇರುವ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಇದರ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ಇನ್ನಷ್ಟೇ ನಡೆಯಬೇಕಿದೆ.
೨. ಶಿವ-ಶಿವೆಯರ ದೇವಸ್ಥಾನಗಳು - ಕರಾವಳಿಯಲ್ಲಿ ಗ್ರಾಮಕ್ಕೊಂದರಂತೆ ಮಹಾಲಿಂಗೇಶ್ವರ ದೇವಸ್ಥಾನವನ್ನು ಕಾಣಬಹುದು. ಶಿವ ಅಲ್ಲದಿದದ್ದರೆ ಅವನ ಮಕ್ಕಳಾದ ಗಣೇಶ -ಸುಬ್ರಹ್ಮಣ್ಯರ ಇಲ್ಲವೇ ಶಿವೆ (ಅಮ್ಮನವರು) ಯ ದೇವಸ್ಥಾನಗಳನ್ನು ಕಾಣಬಹುದು. ಇಷ್ಟೇ ಅಲ್ಲದೆ "ದುರ್ಗಾ ಪರಮೇಶ್ವರಿ" ಎಂಬ ಅಭಿದಾನದಿಂದ ಮಹಾನ್ ಪುಣ್ಯ ಕ್ಷೇತ್ರಗಳು ಕರಾವಳಿಯಾದ್ಯಂತ ವ್ಯಾಪಿಸಿವೆ.
ಲಿಂಗರೂಪಿ ಪರಮಾತ್ಮನ ಹಾಗೂ ಪರಮೇಶ್ವರಿಯ ಆರಾಧನೆಗಳು "ಪ್ರಕೃತಿ-ಪುರುಷ" ಕಲ್ಪನೆಯ ಪ್ರತಿರೂಪವಾಗಿದ್ದು ಇಲ್ಲಿಯ ಜನರಲ್ಲಿ ಜೀವನೋತ್ಸಾಹ ತುಂಬಲು ಕಾರಣವಾಗಿವೆ. ಈ ಸಂಬಂಧ ನಡೆಯುವ ನಿತ್ಯಪೂಜೆ, ಬಲಿ, ಭಜನೆ, ದಾಸೋಹ ಇತ್ಯಾದಿಗಳೂ ದಿನವೂ ಜನರ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸಿದರೆ, ವಾರ್ಷಿಕ ಜಾತ್ರೆ, ದೀಪೋತ್ಸವ, ರಥೋತ್ಸವಗಳು ಹೊಸ ಹುಮ್ಮಸ್ಸನ್ನು ಉಂಟು ಮಾಡುತ್ತವೆ. ಜನರ ಮಾನಸಿಕ ಬೆಳವಣಿಗೆಗೆ ಇವು ಬಹಳ ಸಹಕಾರಿಯಾಗಿವೆ. ಹೀಗೆ ಕರಾವಳಿ ಜನರ ಬೌದ್ದಿಕ ಹಾಗೂ ಮಾನಸಿಕ ಬೆಳವಣಿಗೆಗಳಲ್ಲಿ ಸಂಪ್ರದಾಯಬದ್ಧವಾಗಿ ನಡೆಯುವ ಈ ಆಚರಣೆಗಳು ತುಂಬಾ ಸಹಾಯಕ.
೩. ಭೂತಾರಾಧನೆ - ಇದು ಕರಾವಳಿ ಜನರ ವಿಶಿಷ್ಟ ಹಾಗೂ ಸಾಂಪ್ರದಾಯಿಕ ಆಚರಣೆ. ನಮ್ಮ ಪೂರ್ವಜರಲ್ಲಿ ಕೆಲವರು ಸಮಾಜದ ಒಳಿತಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿ ದೈವತ್ವವನ್ನು ಪಡೆದರು. ಹೀಗೆ ದೈವತ್ವವನ್ನು ಪಡೆದ ಮಹಾಪುರುಷರನ್ನೇ ಭೂತ (ದೈವ) ಎಂದು ಆರಾಧಿಸುವ ಪರಿಪಾಠ ಬೆಳೆಯಿತು. ನಮ್ಮ ಪೂರ್ವಜರ ಧೈವಿಕ ಅಂಶಗಳನ್ನು ಶ್ರಾದ್ಧಾದಿ ಆಚರಣೆಗಳ ಮೂಲಕ ಪೂಜಿಸುವಂತೆ ಈ ಮಹಾಪುರುಷರನ್ನು ನೇಮ, ಕೋಲ ಇತ್ಯಾದಿಗಳ ಮೂಲಕ ಪೂಜಿಸುವುದೇ ಭೂತಾರಾಧನೆ ಎನ್ನಿಸಿಕೊಂಡಿದೆ.
ಒಂದೊಂದು ಧೈವವೂ ಒಂದೊಂದು ದಾರಿಯ ಮೂಲಕ ಸಾಧಕರಾದವರು. ಉದಾಹರಣೆಗೆ ಸತ್ಯ, ನ್ಯಾಯ, ಧರ್ಮ, ಶೌರ್ಯ ಇತ್ಯಾದಿ. ಕರಾವಳಿಯ ಪ್ರತಿಯೊಂದು ಕುಟುಂಬವೂ ಇಂತಹ ಒಬ್ಬ ಆದರ್ಶ ಪುರುಷನನ್ನು ಮಾದರಿಯಾಗಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವಂತೆ ಭಾಸವಾಗುತ್ತವೆ. ಹೀಗಾಗಿ ಭೂತಾರಧನೆಯಲ್ಲಿ ಬರುವ ಆಚರಣೆಗಳಿಂದ ವ್ಯಕ್ತಿಯು ಸದಾಚಾರ ಸಂಪನ್ನನಾಗಿ ಬೆಳೆಯಲು ಸಾಧ್ಯ. ಇಂತಹ ಸಾನ್ನಿಧ್ಯಗಳು ಕರಾವಳಿಯ ಜನರು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತವೆ. ಹೀಗೆ ಧೈವ-ದೇವತಾ ಆರಾಧನಾ ಕೇಂದ್ರಗಳು ಕರಾವಳಿ ಜನರ ಭಯ-ಭಕ್ತಿಯ ಸೆಲೆಯಾಗಿವೆ.
೪. ನಾಗಾರಾಧನೆ - ಇದು ಕರ್ನಾಟಕ ಕರಾವಳಿಯ ವಿಶಿಷ್ಟ ಆರಾಧನೆ. ಈ ಪ್ರದೇಶದಲ್ಲಿ ಮನಸ್ಸುಗಳ ಮೇಲೆ ಹಿಡಿತ ಸಾಧಿಸಿ ದಬ್ಬಾಳಿಕೆಯ ಆಳ್ವಿಕೆ ನಡೆಸುತ್ತಿದ್ದ "ನಾಗಾ" ಗಳ ಕಪಿ ಮುಷ್ಠಿಯಿಂದ ಹೊರಬರುವ ಪ್ರಯತ್ನದಿಂದಾಗಿ ಬಳಕೆಗೆ ಬಂದ ಆಚರಣೆಯೇ ನಾಗಾರಾಧನೆ. ನಾಗಾ ಎಂದರೆ ಮನಸ್ಸು ಎಂದರ್ಥ. ನಾಗಾ ಜನಾಂಗದ ದುಷ್ಟ ಆಳ್ವಿಕೆ ಕೊನೆಗೊಳಿಸಿ ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಹೋರಾಡಿದ ಶ್ರೀ ಅಣ್ಣಪ್ಪಯ್ಯನವರು ಕಂಬಳ ನಾಗಸೂತ್ರವನ್ನು ರಚಿಸಿ, ಚಿತ್ತ ಚಂಚಲತೆಯನ್ನು ನೀಗಿಸಿ, ಸಹೋದರತೆಯನ್ನು ಪ್ರತಿಪಾದಿಸುವ "ಭಾಗವತ" ಸಂಪ್ರದಾಯವನ್ನು ನಮಗೆ ನೀಡಿದರು.
ಮುಂದೆ ನಾಗಾರಾಧನೆಯು ಹಿಡಿತದಲ್ಲಿರಲು ಶರವಣಭವ ಸೂತ್ರವನ್ನು ಸಾಧಿಸಿ ನಾಗ ಮತ್ತು ಸುಬ್ರಹ್ಮಣ್ಯ (ಅಂದರೆ ಚಿತ್ತ + ಜ್ಞಾನ) ರಲ್ಲಿ ಏಕತೆಯನ್ನು ತಂದರು. ಅಂದಿನಿಂದಲೇ ಈ ಪರಶುರಾಮ ಸೃಷ್ಟಿಯಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಮಂಡಲ ಮುಂತಾದ ಆಚರಣೆಗಳು ಹುಟ್ಟಿ, ಉಳಿದು, ಬೆಳೆದು ಬಂದಿವೆ. ಯಾವ ಬುದ್ಧಿಯೂ ಕೂಡಾ ಉತ್ತಮ ಕೆಲಸಕ್ಕೆ ವಿನಿಯೋಗವಾಗಲು ಮೊದಲು ಒಳ್ಳೆಯ ಮನಸ್ಸು ಮಾಡುವುದು ಅತ್ಯಗತ್ಯ. ಇದಕ್ಕೆ ನಾಗಾರಾಧನೆ ಸಹಕಾರಿ.
೫. ಸಹ್ಯಾದ್ರಿಯ ಸಂಪತ್ತು - ಸಹ್ಯಾದ್ರಿಯ ಖನಿಜ ಹಾಗೂ ಸಸ್ಯ ಸಂಪತ್ತುಗಳಿಗೂ ಕರಾವಳಿ ಜನರ ಬುದ್ಧಿಮತ್ತೆಗೂ ನೇರ ಸಂಬಂಧವಿದೆ. ಮಳೆಗಾಲದಲ್ಲಿ ಸಹ್ಯಾದ್ರಿಯಿಂದ ಹರಿದು ಬರುವ ನೀರಿನ ಜೊತೆ ಬರುವ ಖನಿಜಗಳು ಹಾಗೂ ವನಸ್ಪತಿಗಳು ಸಾಗರವನ್ನು ಸೇರುತ್ತವೆ. ಅವುಗಳನ್ನು ತಿಂದು ಬೆಳೆಯುವ ಮೀನುಗಳು ಹಾಗೂ ಅವನ್ನು ತಿನ್ನುವ ಕರಾವಳಿಗ ಈ ಸತ್ವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ಹೀಗೆ ಹಲವು ವಿಶಿಷ್ಟ ಪೋಷಕಾಂಶಗಳ ಸಾರ ಮೀನಿನ ಮುಖಾಂತರ ಮನುಷ್ಯನನ್ನು ತಲುಪುತ್ತವೆ. ಒಂದು ಕಾಲದಲ್ಲಿ ನಿಸ್ಸಾರವಾಗಿ, ಏನನ್ನೂ ಬೆಳೆಯಲು ಅಯೋಗ್ಯವೆನ್ನಿಸಿದ್ದ ಈ ಭೂಮಿಯಲ್ಲಿ ಮೀನಿನ ಕೃಷಿಯನ್ನು ಸಂಶೋಧಿಸಿ ಜನರಿಗೆ ನೀಡಿದವರು "ಅಗಸ್ಥ್ಯರು". ಇಂಥ ಮೀನಿನ ಬೆಳೆಯನ್ನು ಸಸ್ಯಾಹಾರ ಎಂದು ಪರಿಗಣಿಸಲಾಗುತ್ತಿತ್ತು.
ಅದೇನೇ ಇರಲಿ, ಕೇವಲ ಬಾಯಿರುಚಿಗೆ ಅಲ್ಲದೆ ಔಷಧಿ ಎಂದು ಬಳಸುವ ಪ್ರತಿಯೊಂದು ಆಹಾರಪದಾರ್ಥವೂ ಸಸ್ಯಾಹಾರಕ್ಕೆ ಸಮನಲ್ಲವೇ! ಇನ್ನು ಸಹ್ಯಾದ್ರಿಯ ದೆಸೆಯಿಂದ ಉಂಟಾಗಿರುವ ಅತಿ ವಿಶಿಷ್ಟ ಹವಾಮಾನ (ಅತೀ ಹೆಚ್ಚೆನಿಸುವ ಮಳೆ, ಚಳಿ ಮತ್ತು ಬಿಸಿಲು) ಇಲ್ಲಿನ ಜನರನ್ನು ಚುರುಕಾಗಿರುವಂತೆ ಮಾಡಿದೆ. ಅದಕ್ಕೆ ತಕ್ಕುದಾದ ಪರಿಸರವೂ ರೂಪುಗೊಂಡು ವಿಶಿಷ್ಟ ತಳಿಯ ಜನರ ಉಗಮಕ್ಕೆ ಕಾರಣವಾಗಿದೆ.
೬. ಯಕ್ಷಗಾನ - ಇದರ ಉಗಮವಾದದ್ದೇ ಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ. ನೈತಿಕ ಬೋಧನೆಗಾಗಿ ಆಯ್ದ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಲಾಗುತ್ತಿತ್ತು. ಅಸತ್ಯದ ಮೇಲೆ ಸತ್ಯದ ಜಯ, ಅಧರ್ಮದ ಮೇಲೆ ಧರ್ಮದ ವಿಜಯದಂತಹ ಸಂದರ್ಭಗಳನ್ನು ಗಾನ, ನಾಟ್ಯ, ಅರ್ಥಗಾರಿಕೆ, ವೇಷ ಭೂಷಣಗಳ ಮೂಲಕ ಪ್ರದರ್ಶಿಸಿ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರುವಂತೆ ಮಾಡಲಾಗುತ್ತಿತ್ತು. ಇನ್ನಿತರ ಕಲೆಗಳಾದ ಹರಿಕಥೆ, ತಾಳಮದ್ದಲೆ, ಹೂವಿನ ಕೋಲುಗಳೂ ಕೂಡ ಜ್ಞಾನವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತವೆ.
ಕೇವಲ ಯಕ್ಷಗಾನ ಒಂದರಿಂದಲೇ ಮಹಾಕಾವ್ಯಗಳ, ಪುರಾಣ-ಉಪ ಪುರಾಣಗಳ, ಇನ್ನಿತರ ಪ್ರಮುಖ ಸಾಹಿತ್ಯಗಳ ಪರಿಚಯ ಸಾಮಾನ್ಯ ಜನರಿಗೂ ಆಗುತಿತ್ತು. ಯಾವುದೇ ಆಧುನಿಕ ಶಿಕ್ಷಣ ವಿಧಾನವೂ, ಪಠ್ಯಕ್ರಮವೂ ಇದಕ್ಕೆ ಸಾಟಿಯಾಗಲಾರದು. ಆಧುನಿಕ ಶಿಕ್ಷಣ ನೀಡಲಾರದಂತಹ ಸಂಸ್ಕಾರಗಳನ್ನು ಯಕ್ಷಗಾನ ಕಲಿಸಿಕೊಡಬಲ್ಲದು. ಇದರಿಂದ ಸಾಂಸ್ಕೃತಿಕ ಔನ್ನತ್ಯವನ್ನು ಸಾಧಿಸಬಹುದು. ಹೀಗೆ ಯಕ್ಷಗಾನವು ವಿಶ್ವಕ್ಕೆ ಕರಾವಳಿ ಕರ್ನಾಟಕವು ನೀಡಿರುವ ವಿಶಿಷ್ಟವಾದ ಕೊಡುಗೆ.
೭. ರತ್ನಾಕರ - ರತ್ನಾಕರ (ಅರಬ್ಬೀ ಸಮುದ್ರ) ದಿಂದ ಉತ್ಪಾದನೆಯಾಗುವ ಉಪ್ಪು ಜಗತ್ತಿನ ಸರ್ವಶ್ರೇಷ್ಠ ಆಹಾರ ಉತ್ಪನ್ನ.
ಸಹ್ಯಾದ್ರಿಯಿಂದ ಹರಿದುಬರುವ ನದಿಗಳು ತರುವ ಸಾರವನ್ನು ತನ್ನ ಅಲೆಗಳ ಮೂಲಕ ಸಂಸ್ಕರಿಸಿ ರತ್ನಾಕರ ನೀಡುವ ಪ್ರತಿಯೊಂದು ಲವಣದ ಕಣವೂ ಶಿವ ಲಿಂಗದಷ್ಟೇ ಪೂಜ್ಯ. ಇದನ್ನು ಬಳಸಿ ತಯಾರಾದ ಆಹಾರವು ಸದ್ಬುದ್ಧಿ, ಸದಾಚಾರಗಳನ್ನು ಪ್ರೇರೇಪಿಸುತ್ತದೆ. ಇದರ ಬಗ್ಗೆ ವಿವರವಾಗಿ ಗುರುಗಳ "ಲವಣ ವೃತ" ಪುಸ್ತಕದಲ್ಲಿ ಬರೆಯಲಾಗಿದೆ. ಹೀಗಾಗಿ ರತ್ನಾಕರನೂ ಒಂದು ರೀತಿಯಲ್ಲಿ ಇಲ್ಲಿನ ಜನರ ಬೌದ್ಧಿಕ ಉನ್ನತಿಗೆ ಕಾರಣನಾಗಿದ್ದಾನೆ.
೮. ಸುಬ್ರಹ್ಮಣ್ಯ ದೇವಸ್ಥಾನಗಳು - ಶಿವ ಎಂದರೆ ಪೂರ್ಣ, ಶೂನ್ಯ ಅಥವಾ ಲಿಂಗ. ಅಂತಹ ಪೂರ್ಣದ ೬ ಭಾಗಗಳು ಗಿರಿಜಾ, ಗಂಗಾ, ಚಂದ್ರ, ನಾಗ, ಗಣಪತಿ (ಪ್ರಕೃತಿ) ಮತ್ತು ಸುಬ್ರಹ್ಮಣ್ಯ (ಜ್ಞಾನ).
ಇಂತಹ ಜ್ಞಾನ ಭಾಗವಾದ ಸುಬ್ರಹ್ಮಣ್ಯನ ಆರಾಧನೆ ಕರಾವಳಿ ಆದ್ಯಂತ ಕಂಡುಬರುತ್ತದೆ. ಈ ಮೂಲಕ ಸ್ವೇಚ್ಛಾ ಪ್ರವೃತ್ತಿಯ, ಉನ್ಮಾದಾವಸ್ಥೆಯಲ್ಲಿರುವ ಮನಸ್ಸನ್ನು (ನಾಗ) ಹಿಡಿತದಲ್ಲಿಡಲು ಸುಬ್ರಹ್ಮಣ್ಯ ಸೂತ್ರವನ್ನು ಬಳಸಲಾಗುತ್ತದೆ. ಇಲ್ಲಿನ ಜನರು ಜ್ಞಾನದ ವೈಪರೀತ್ಯದಿಂದಾಗಿ ಕೆಟ್ಟ ದಾರಿಯನ್ನು ತುಳಿಯದೇ ಇರಲು ಇದು ಬಲು ಮುಖ್ಯ ಕಾರಣ ಎಂದು ನನ್ನ ಅನಿಸಿಕೆ.
೯. ಕುಚ್ಚಿಗೆ ಅಕ್ಕಿ - ಇದು ಕರಾವಳಿ ಜನರ ವಿಶಿಷ್ಟ ಆಹಾರ ಪದಾರ್ಥ. ಭತ್ತವನ್ನು ಬೇಯಿಸಿ ಅದರ ಒಳಗಿನ ಪದರವನ್ನು ಅಕ್ಕಿಯೊಂದಿಗೆ ಉಳಿಸುವ ಮೂಲಕ ಈ ರೀತಿಯ ಅಕ್ಕಿಯನ್ನು ತಯಾರಿಸಲಾಗುತ್ತದೆ. ಯಾವುದೇ ಉಪ ಪದಾರ್ಥಗಳ ಅಗತ್ಯವಿಲ್ಲದೆ ಕೇವಲ ಗಂಜಿಗೆ ಉಪ್ಪನ್ನೂ, ಉಪ್ಪಿನ ಕಾಯಿಯನ್ನೂ ಹಾಕಿ ಸೇವಿಸಬಹುದು.
ಕೆಲವು ದಶಕಗಳ ಹಿಂದೆ ಕರಾವಳಿಯ ಮನೆಗಳಲ್ಲಿ ದಿನವೂ ಬೆಳಿಗ್ಗೆ ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ತಿಂಡಿ ಮಾಡುವ ಕ್ರಮವಿದ್ದರೆ ಉಳಿದ ಎಲ್ಲಾ ದಿನ ಗಂಜಿಯನ್ನೇ ಉಣ್ಣುತ್ತಿದ್ದರು. ಈ ಅಕ್ಕಿಯ ವಿಶೇಷತೆ ಎಂದರೆ ಅದರ ಮೇಲ್ಮೈಯಲ್ಲಿರುವ ವಿಶಿಷ್ಟ ಪ್ರೋಟೀನಿನ ಅಂಶ. ಇದು ಅಕ್ಕಿಗೆ ವಿಶಿಷ್ಟ ಸ್ವಾದವನ್ನು ನೀಡುವುದಲ್ಲದೆ ದೇಹಕ್ಕೂ ತಂಪು ಹಾಗೂ ಪೌಷ್ಟಿಕಾಂಶಭರಿತ. ವ್ಯಕ್ತಿಯ ಬೌದ್ಧಿಕ ವಿಕಾಸದ ಮೇಲಿನ ಇದರ ಪರಿಣಾಮಗಳ ಅಧ್ಯಯನ ಇನ್ನೂ ನಡೆಯಬೇಕಷ್ಟೇ.
೧೦. ವಿಶಿಷ್ಟ ತರಕಾರಿಗಳು - ಕರಾವಳಿಯಲ್ಲಿ ಬೆಳೆಯುವ ತರಕಾರಿಗೂ, ಇತರ ಪ್ರದೇಶಗಳ ತರಕಾರಿಗೂ ಇರುವ ಭೌತಿಕ ವ್ಯತ್ಯಾಸಗಳು (ಬಣ್ಣ, ಆಕಾರ ಇತ್ಯಾದಿ) ನನ್ನಲ್ಲಿ ಹಲವಾರು ಬಾರಿ ಕುತೂಹಲವನ್ನು ಹುಟ್ಟು ಹಾಕಿವೆ. ಹೆಚ್ಚಿನ ಎಲ್ಲಾ ಬಗೆಯ ತರಕಾರಿಗಳಲ್ಲಿ ಈ ವ್ಯತ್ಯಾಸಗಳು ಕಂಡು ಬರುತ್ತವೆ.
ಕೆಲವು ರುಚಿಯಲ್ಲಿ ಮಾತ್ರ ಸಾಮ್ಯತೆ ತೋರಿದರೆ ಅವುಗಳಲ್ಲಿನ ಭೌತಿಕವಾದ ವ್ಯತ್ಯಾಸಗಳು ಅಗಾಧ. ಉದಾಹರಣೆಗೆ ಕುಂಬಳ ಕಾಯಿ, ಬದನೆ ಕಾಯಿ, ಸೌತೆ ಕಾಯಿ, ಇಬ್ಬುಳ್ಳೆ, ಕಲ್ಲಂಗಡಿ ಹಣ್ಣು ಇತ್ಯಾದಿ. ಇನ್ನು ಊರಿನ ತೊಂಡೆ, ಅಲಸಂದೆ, ಪಡವಲ, ಹೀರೆ, ಮಟ್ಟು ಗುಳ್ಳ, ಸೊಪ್ಪುಗಳ ರುಚಿಯನ್ನು ಉಂಡವನೇ ಬಲ್ಲ. ಈ ವ್ಯತ್ಯಾಸಗಳಿಗೆ ಮಣ್ಣಿನ ಗುಣ ಕಾರಣ ಎಂದಾದರೆ, ಈ ಮಣ್ಣಿನ ಗುಣವೇ ಇಲ್ಲಿನ ಜನರನ್ನು ಇತರರಿಂದ ಬೇರೆಯಾಗಿಸಿದೆ ಅನ್ನಬಹುದೇ?
೧೧. ಕಂಬಳ - ಇದೊಂದು ವಿಶಿಷ್ಟ ಜನಪದ ಆಚರಣೆಯಾದರೂ ಸಂಪೂರ್ಣ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ಕೋಣರೂಪದ ವಿಕೃತ ಮನಸ್ಸನ್ನು ದಂಡಿಸುವ ವಿಧಾನವೇ ಕಂಬಳ.
ಹಿಂದೆ ಅರಸರ ಆಳ್ವಿಕೆಯಲ್ಲಿ ಕೋಣದಂತಹ ದುರ್ಗುಣ ಮನಸ್ಸಿನ ಮನುಷ್ಯನನ್ನು ದಂಡಿಸಿ ಸರಿದಾರಿಗೆ ತರಲು ಕಂಬಳವನ್ನು ಬಳಸುತ್ತಿದ್ದರು. ಮುಂದೆ ಇದೇ ಸಾಂಕೇತಿಕವಾಗಿ ಕೋಣಗಳನ್ನು ಓಡಿಸುವ ಕ್ರೀಡೆಯಾಗಿ ಪರಿವರ್ತನೆಗೊಂಡಿರಬಹುದು. ಮನಸ್ಸಿನ ನಿಯಂತ್ರಣದ ದ್ಯೋತಕವಾದ ಕಂಬಳವು ಒಂದು ರೀತಿಯಲ್ಲಿ ಜ್ಞಾನ ಪ್ರಚೋದಕವೆಂದರೆ ತಪ್ಪಾಗಲಾರದು.
೧೨. ಸಂಪ್ರದಾಯದ ಮುಂದುವರಿಕೆ - ಹಿರಿಯರು ನಡೆಸಿಕೊಂಡು ಬಂದಂತಹ ಆಚರಣೆಗಳನ್ನೂ, ಸಂಪ್ರದಾಯವನ್ನೂ ಉಳಿಸಿ ಬೆಳೆಸಿಕೊಂಡು ಬಂದದ್ದು ಕರಾವಳಿ ಜನರ ಹೆಗ್ಗಳಿಕೆ.
ಆಧುನಿಕ ಜೀವನದಲ್ಲಿ ಈ ಸಂಪ್ರದಾಯಗಳನ್ನು ಕಸಿ ಮಾಡಿ ಬದುಕುವಷ್ಟು ಬುದ್ದಿವಂತರು ಇಲ್ಲಿನ ಜನ. ಇಂತಹ ಮನೋಭಾವವೇ ಕರಾವಳಿಯನ್ನು ಸಾಂಸ್ಕ್ರತಿಕವಾಗಿ ಸಮೃದ್ಧ ಪ್ರದೇಶವನ್ನಾಗಿಸಿದೆ. ಇಂತಹ ಸಾಂಸ್ಕೃತಿಕ ನೆಲೆಗಟ್ಟೇ ಇಲ್ಲಿನ ಜನರ ಬುದ್ಧಿವಂತಿಕೆಗೆ ಕಾರಣ.
ಈ ೧೨ ವಿಷಯಗಳಲ್ಲಿ ೧೨ ಸಂಶೋಧನಾ ಪ್ರಬಂಧಗಳನ್ನೇ ಮಂಡಿಸಬಹುದು. ಅಷ್ಟು ಜನ ಪಿ.ಎಚ್.ಡಿ ಪದವಿ ಪಡೆಯಬಹುದು, ಅಷ್ಟೊಂದು ವಿಷಯಗಳಿವೆ ಇಲ್ಲಿ ಅಡಗಿವೆ. ಇಂತಹ ಸಂಶೋಧನೆಗಳು ಸಾಕಾರಗೊಂಡು ಉತ್ತಮ ನಾಗರಿಕ ಸಮಾಜದ ನಿರ್ಮಾಣವಾಗಲಿ ಎನ್ನುವುದೇ ಈ ಲೇಖನದ ಆಶಯವಾಗಿದೆ.
೧೨. ಸಂಪ್ರದಾಯದ ಮುಂದುವರಿಕೆ - ಹಿರಿಯರು ನಡೆಸಿಕೊಂಡು ಬಂದಂತಹ ಆಚರಣೆಗಳನ್ನೂ, ಸಂಪ್ರದಾಯವನ್ನೂ ಉಳಿಸಿ ಬೆಳೆಸಿಕೊಂಡು ಬಂದದ್ದು ಕರಾವಳಿ ಜನರ ಹೆಗ್ಗಳಿಕೆ.
ಆಧುನಿಕ ಜೀವನದಲ್ಲಿ ಈ ಸಂಪ್ರದಾಯಗಳನ್ನು ಕಸಿ ಮಾಡಿ ಬದುಕುವಷ್ಟು ಬುದ್ದಿವಂತರು ಇಲ್ಲಿನ ಜನ. ಇಂತಹ ಮನೋಭಾವವೇ ಕರಾವಳಿಯನ್ನು ಸಾಂಸ್ಕ್ರತಿಕವಾಗಿ ಸಮೃದ್ಧ ಪ್ರದೇಶವನ್ನಾಗಿಸಿದೆ. ಇಂತಹ ಸಾಂಸ್ಕೃತಿಕ ನೆಲೆಗಟ್ಟೇ ಇಲ್ಲಿನ ಜನರ ಬುದ್ಧಿವಂತಿಕೆಗೆ ಕಾರಣ.
ಈ ೧೨ ವಿಷಯಗಳಲ್ಲಿ ೧೨ ಸಂಶೋಧನಾ ಪ್ರಬಂಧಗಳನ್ನೇ ಮಂಡಿಸಬಹುದು. ಅಷ್ಟು ಜನ ಪಿ.ಎಚ್.ಡಿ ಪದವಿ ಪಡೆಯಬಹುದು, ಅಷ್ಟೊಂದು ವಿಷಯಗಳಿವೆ ಇಲ್ಲಿ ಅಡಗಿವೆ. ಇಂತಹ ಸಂಶೋಧನೆಗಳು ಸಾಕಾರಗೊಂಡು ಉತ್ತಮ ನಾಗರಿಕ ಸಮಾಜದ ನಿರ್ಮಾಣವಾಗಲಿ ಎನ್ನುವುದೇ ಈ ಲೇಖನದ ಆಶಯವಾಗಿದೆ.
March 23, 2015
"ಗಧಾಧರ ಪೀಠ"
"ಗಯಾ" ದಂತಹ ಪೌರಾಣಿಕ ಸ್ಥಳಗಳಲ್ಲಿ ಇರುವಂತಹ "ಗಧಾಧರ ಪೀಠ" ವನ್ನು ಪಾವಂಜೆಯ ಪುಣ್ಯಭೂಮಿಯಲ್ಲಿ ದಿನಾಂಕ ೨೩-೩-೨೦೧೫ ರಂದು ನಮ್ಮ ಗುರುಗಳಾದಂತಹ ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ಪ್ರಿತಿಷ್ಠಾಪಿಸಲಾಯಿತು.
ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರೂ ಮಾಡಲೇಬೇಕಾದ ಕರ್ತವ್ಯಗಳಲ್ಲಿ ವೇದಾಧ್ಯಯನವೂ ಒಂದು. ಆದರೆ ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಕೆಲಸ ಕಾರ್ಯಗಳಲ್ಲಿ ನಿರತನಾಗಿರುವುದರಿಂದ ವೇದಾಧ್ಯಯನ ಮಾಡಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ವೇದಾಧ್ಯಯನ ನಿರತ ಕೆಲವೇ ಮಂದಿಯ ಪುಣ್ಯಫಲವನ್ನು ಸಾರ್ವತ್ರಿಕವಾಗಿ ಹಂಚುವ ವ್ಯವಸ್ಥೆಯನ್ನು ರೂಪಿಸಲಾಯಿತು. ಈ ಪ್ರಕಾರವಾಗಿ "ಗಧಾಧರ"ನ ಉಪಾಸನೆಯನ್ನು ಬಳಕೆಗೆ ತರಲಾಯಿತು. ವೇದಾಧ್ಯಯನಶೀಲರ ಪುಣ್ಯದ ಆರನೆಯ ಒಂದು ಭಾಗ ಮಾತ್ರ ಅವರಲ್ಲಿ ಸಂಚಯನಗೊಂಡರೆ ಉಳಿದ ಭಾಗಗಳು ರಾಜಾದಾಯ ಮುಂತಾದ ಭಾಗಗಳಾಗಿ ಹಂಚಿಕೆಯಾಗುತ್ತದೆ.
ಗಧಾಧರನ ಉಪಾಸನೆ ಎಂದರೆ ಪಿತೃಯಜ್ಞ. ಅಗ್ನಿ ಶಾಸ್ತ, ದೇವಪಿತೃ ತರ್ಪಣ, ವಿಶ್ವೇದೇವತಾ ಆರಾಧನೆ, ಪಿತೃ ತರ್ಪಣ (ಶ್ರಾದ್ಧ) ಗಳಿಂದ ವೇದಾಧ್ಯಯನದ ಪುಣ್ಯವನ್ನು ಪಡೆಯಲು ಸಾಧ್ಯ. ಗಧಾಧರ ಪೀಠದಲ್ಲಿ ಶ್ರಾದ್ಧ ಕರ್ಮವನ್ನು ಮಾಡುವುದರಿಂದ ಪಿತೃಗಳಿಗೆ ಸದ್ಗತಿಯನ್ನು ನೀಡಲು ಸಾಧ್ಯ.
March 9, 2015
"ಮೂರ್ಖ" ರ ಕೈಯಲ್ಲಿ "ಸ್ಮಾರ್ಟ್ ಫೋನ್ "ಗಳು
ಸೂರ್ಯನ ಕಿರಣಗಳ ಪ್ರತಿಫಲನದ ಸಹಾಯದಿಂದ ಈ ಸುಂದರವಾದ ಪ್ರಕೃತಿಯನ್ನು ನೋಡಲು ಆ ಸೃಷ್ಟಿಕರ್ತ ನೀಡಿರುವ ಅಮೂಲ್ಯವಾದ ಕಣ್ಣುಗಳಿಗೆ, ಸ್ವಪ್ರಕಾಶ ಹೊಂದಿರುವ LCD ಪರದೆಯನ್ನು ಪದೇ ಪದೇ ತೋರಿಸುತ್ತ ಹಿಂಸಿಸುತ್ತಿದ್ದೇವೆ ಎಂದು ಅನಿಸುತ್ತಿಲ್ಲವೆ? ಕೌಶಲ್ಯಯುತವಾದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಆ ದೇವರು ನೀಡಿದ ಕೈಗಳನ್ನು, ಸೂಕ್ಷ್ಮವಾದ ಬೆರಳುಗಳನ್ನು ಸ್ಮಾರ್ಟ್ ಫೋನ್ ನ ಅತಿಯಾದ ಉಪಯೋಗಕ್ಕೆ ದುರ್ಬಳಕೆ ಮಾಡುತ್ತಿದ್ದೆವಲ್ಲವೇ? ನಿಸರ್ಗದ ಅತ್ಯದ್ಭುತವಾದ ನಾದ ತರಂಗಗಳ ಗ್ರಹಿಕೆಗೆ ಏಕೈಕ ಸಾಧನವಾಗಿರುವ ಕಿವಿಗಳಿಗೆ ವಿಪರೀತವಾದ ಕಂಪನಗಳನ್ನು ನೀಡುವ ಸಾಧನಗಳನ್ನು ತುರುಕಿಸಿ ಆಲಿಸುವಂತೆ ಮಾಡುವುದು ತಪ್ಪಲ್ಲವೆ? ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾಭ್ಯಾಸದ ಅಮೂಲ್ಯವಾದ ಸಮಯವನ್ನು ಸ್ಮಾರ್ಟ್ ಫೋನ್ ನ ಅತಿಯಾದ ಬಳಕೆಯಲ್ಲಿ ಹಾಳುಮಾಡುವುದು ನಿಮ್ಮನ್ನು ನಂಬಿರುವ ತಂದೆ ತಾಯಿಗಳಿಗೆ ಮಾಡುವ ದ್ರೋಹವಲ್ಲವೇ? ಹಾಗಿದ್ದರೆ ಈ ಕೆಳಗೆ ಪಟ್ಟಿ ಮಾಡಿರುವ ಅಂಶಗಳನ್ನು ಗಂಭೀರವಾಗಿ ತರ್ಕಿಸಿ ಉತ್ತರ ಪಡೆದುಕೊಳ್ಳಿ.
೧. ಸ್ಮಾರ್ಟ್ ಫೋನ್ ನ ಅತಿಯಾದ ಬಳಕೆಯಿಂದ ನಿಮ್ಮ ನಿದ್ರಾಸಮಯ ಕಡಿಮೆ ಆಗಿದೆಯೇ?
ತಾರುಣ್ಯದಲ್ಲಿ ಮನುಷ್ಯನಿಗೆ ೮ ರಿಂದ ೯ ಗಂಟೆ ನಿದ್ರೆಯ ಅಗತ್ಯ ಇದೆ. ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹ, ಮಲಗುವಾಗಲೂ ಕಿವಿಗೆ ಹಾಕಿಕೊಂಡು ಹಾಡುಗಳನ್ನು ಕೇಳುವ ಚಟ, ಇವುಗಳಿಂದಾಗಿ ನಿದ್ರೆಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಇದು ಮನುಷ್ಯನ ಸ್ಮರಣ ಸಾಮರ್ಥ್ಯವನ್ನು ಕುಂಠಿತಗೊಳಿಸುವುದಲ್ಲದೆ ನಿದ್ರಾಹೀನತೆ, ಖಿನ್ನತೆ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಬಗ್ಗೆ ಬರೆದರೆ ಅದು ಇನ್ನೊಂದು ಪುರಾಣವೇ ಆದೀತು!
೨. ಟಚ್ ಸ್ಕ್ರೀನಿನ ಅವಾಂತರದ ಬಗ್ಗೆ ನಮಗೆಷ್ಟು ಗೊತ್ತು?
ಕೈಬೆರಳು ಮಾನವ ದೇಹದ ಅತ್ಯಮೂಲ್ಯ ಅಂಗಗಳಲ್ಲಿ ಒಂದು. ಮಾನವ ಇಂದು ಈ ಪ್ರಪಂಚದಲ್ಲಿ ಇತರ ಪ್ರಾಣಿಗಳಿಗಿಂತ ಉನ್ನತ ಸ್ತರದ ಜೀವನ ನಡೆಸುತ್ತಿರಲು ಈ ಕೈ ಬೆರಳುಗಳೇ ಕಾರಣ. ನಮ್ಮ ನರವ್ಯೂಹದ ಪ್ರತಿಯೊಂದು ಮುಖ್ಯನರದ ಅಂತಿಮ ಗಮ್ಯಸ್ಥಾನ ಬೆರಳುಗಳು. ಕೇವಲ ಸ್ಪರ್ಶ ಮಾತ್ರ ದಿಂದ ಕಣ್ಣು ನೋಡಲಾಗದ್ದನ್ನು ಗ್ರಹಿಸುವ ಸಾಮರ್ಥ್ಯ ಬೆರಳಿಗಿದೆ (ಕಣ್ಣು ನೋಡುವುದೆಲ್ಲ ಯಾವಾಗಲೂ ನಿಜವಲ್ಲ!). ಅದ್ಭುತ ಚಿತ್ರಕಲೆ, ಶಿಲ್ಪಕಲೆ, ಕುಸುರಿ ಕಲೆ, ನೇಯ್ಗೆ ಇತ್ಯಾದಿಗಳು ನಮ್ಮ ಬೆರಳುಗಳ ಕೊಡುಗೆ. ಅಗಣಿತ ಶಸ್ತ್ರಚಿಕಿತ್ಸೆಗಳ ಮೂಲಕ ಜೀವಿಗಳ ಪ್ರಾಣ ಉಳಿಸುವ ಸಾಮರ್ಥ್ಯ ಈ ಬೆರಳುಗಳಿಗಿವೆ. ಇಂತಹ ಅತ್ಯಮೂಲ್ಯ ಸಂಪತ್ತನ್ನು ನಾವು ಇಂದು ಬಳಸುತ್ತಿರುವುದು ಏತಕ್ಕೆ? ಟಚ್ ಸ್ಕ್ರೀನ್ ಮೇಲೆ ಉಜ್ಜಲು!!
ಟಚ್ ಸ್ಕ್ರೀನ್ ತಂತ್ರಜ್ಞಾನ ನಾವು ತಿಳಿದಷ್ಟು ಸರಳವಲ್ಲ. ಇವುಗಲ್ಲಿ ಎರಡು ವಿಧ, ವಿರೋಧಕ (resistive) ಪರದೆ ಹಾಗೂ ಧಾರಣ (capacitive) ಪರದೆ. ವಿರೋಧಕ ಬಗೆಯವು ATM ನಂತಹ ದೊಡ್ಡ ಯಂತ್ರಗಳಲ್ಲೂ , ಧಾರಣ ಬಗೆಯವು ಸ್ಮಾರ್ಟ್ ಫೋನ್ ಗಳಲ್ಲಿ ಹಚ್ಚು ಜನಪ್ರಿಯವದವು. ಈ ಎರಡೂ ಬಗೆಯ ಪರದೆಗಳ ಉಪಯೋಗದಲ್ಲಿ ಸಣ್ಣ ಪ್ರಮಾಣದ ವಿದ್ಯುತ್ತನ್ನು ಪರದೆಯ ಮೇಲೆ ನಿರಂತರವಾಗಿ ಹಾಯಿಸಲಾಗುತ್ತದೆ. ನಮ್ಮ ಕೈ ಬೆರಳು ಇದರ ಸಂಪರ್ಕಕ್ಕೆ ಬಂದಾಗ ಆಗುವ ವೋಲ್ಟೇಜ್ ಬದಲಾವಣೆಯನ್ನು ಅಳೆಯುವ ಮೂಲಕ ಬೆರಳಿನ ಸ್ಥಾನವನ್ನು ಕಂಡುಹಿಡಿಯಲಾಗುತ್ತದೆ. ಈ ವಿದ್ಯುತ್ ಸಣ್ಣ ಪ್ರಮಾಣದ್ದೆ ಆದರೂ ನಿರಂತರವಾಗಿ ವಿದ್ಯುತ್ ತರಂಗಗಳನ್ನು ಮೆದುಳಿಗೆ ಕಳುಹಿಸುವ ಮೂಲಕ ಅನಾಹುತಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ. ಬೆರಳುಗಳ ಚಲನೆಯನ್ನು ನಿಯಂತ್ರಿಸುವ ಮೆದುಳಿನ ಭಾಗದಲ್ಲಿ (somatosensory cortex) ಹೆಚ್ಚಿದ ಪ್ರತಿಕ್ರಿಯೆಗಳು ಈ ವಾದವನ್ನು ಪುಷ್ಟೀಕರಿಸಿವೆ. ಈ ಪ್ರತಿಕ್ರಿಯೆಗಳು ಮೆದುಳಿನ ಆ ಭಾಗದ ಇತರ ಕೆಲಸಗಳ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಅಷ್ಟೇ ಅಲ್ಲದೆ ಇದು ನೋವು, ಸೆಳೆತ ಹಾಗು ಇತರ ಚಲನೆಯ ಅಸ್ವಸ್ಥತೆ (ಉದಾ: ಡಿಸ್ಟೊನಿಯ) ಗಳಿಗೂ ಕಾರಣವಾಗಬಹುದು. ಹೆಬ್ಬೆರಳಿನ ಮೇಲೆ ಬೀಳುವ ಅತಿಯಾದ ಒತ್ತಡವು ಅದಕ್ಕೆ ಸಂಬಂದಿಸಿದ ನರ ಹಾಗೂ ಸ್ನಾಯುಗಳಿಗೆ ಅಶಕ್ತತೆಯನ್ನು ಉಂಟುಮಾಡುತ್ತವೆ. ಇನ್ನು ಸ್ಮಾರ್ಟ್ ಫೋನ್ ಗಳ ಬಳಕೆಯ ಸಂದರ್ಭದಲ್ಲಿನ ನಮ್ಮ ದೇಹ ಭಂಗಿಗಳೂ ಹಲವು ತೊಂದರೆಗಳಿಗೆ ಕಾರಣವಾಗಿವೆ. ಬೆರಳುಗಳನ್ನು ನಿಯಂತ್ರಿಸುವ ನರ, ಸ್ನಾಯು, ಸ್ನಾಯುರಜ್ಜು (ಟೆಂಡನ್), ಮೂಳೆ ಹಾಗು ಅದರ ಸಂಧಿಗಳು ಅತಿಯಾದ ಘರ್ಷಣೆಗಳನ್ನು ಸಹಿಸಬೇಕಾಗಿವೆ. ಹಸ್ತ, ಮೊಣಕೈ ಹಾಗೂ ಕೈಗಂಟುಗಳು ಅತಿಯಾದ ಒತ್ತಡದಿಂದ ಬಳಲುತ್ತವೆ. ಇದರಿಂದ Quervain syndrome
ಕೈ ಹಾಗೂ ಕಾಲು ಬೆರಳುಗಳ ನಿರ್ದಿಷ್ಟ ಪ್ರದೇಶಗಳ ಮೇಲೆ ಒತ್ತಡ ನೀಡುವ ಮೂಲಕ ಹಲವು ರೋಗಗಳನ್ನು ಗುಣಪಡಿಸುವ ಪದ್ಧತಿ (acupuncture) ನಮ್ಮಲ್ಲಿ ಎಷ್ಟೋ ಹಿಂದಿನ ಕಾಲದಿಂದಲೂ ಪರಿಚಯವಿದೆ. ಹಾಗಿದ್ದ ಮೇಲೆ ಅಲ್ಲಿ ಸ್ಮಾರ್ಟ್ ಫೋನಿನ ದುರ್ಬಳಕೆಯು ದೇಹದ ಮೇಲೆ ವಿಪರೀತ ಪರಿಣಾಮ ಉಂಟುಮಾಡುವುದು ಸ್ವಾಭಾವಿಕವಲ್ಲವೇ! ಅಲ್ಲದೆ ಇತ್ತೀಚೆಗೆ ನನ್ನ ಗಮನಕ್ಕೆ ಬಂದ ಒಂದು ಚಿಕಿತ್ಸಾ ಪದ್ದತಿಯ ಬಗ್ಗೆ ತಿಳಿಸಬಯಸುತ್ತೇನೆ. ಬೆಂಗಳೂರಿನ ತಂತ್ರಜ್ಞಾನಿಯೂ, ವೈದ್ಯರೂ ಆಗಿರುವ ಓರ್ವರು finger tip revolution (FTR ) ಎಂಬ ಚಿಕಿತ್ಸಾ ವಿಧಾನವನ್ನೇ ಕಂಡುಹಿಡಿದಿದ್ದಾರೆ. ಇದರಲ್ಲಿ ಬೆರಳ ತುದಿಯಿಂದ ಹೊರಡುವ ಚೈತನ್ಯ ಮಾತ್ರದಿಂದಲೇ ದೇಹದ ಎಲ್ಲ ತರಹದ ಖಾಯಿಲೆಗಳನ್ನು ವಾಸಿ ಮಾಡಲಾಗುತ್ತದೆ. ಇದು ಬೆರಳುಗಳ ಅಗಾಧ ಶಕ್ತಿಯ ಒಂದು ಉದಾಹರಣೆ ಮಾತ್ರ.
೩. ಕಣ್ಣಿನ ಮೇಲಾಗುವ ದುಷ್ಪರಿಣಾಮಗಳು
ಮಾನವನ ಕಣ್ಣಿನ ಸ್ವಾಭಾವಿಕ ನೋಡುವ ವಿಧಾನವೆಂದರೆ, ಯಾವುದಾದರೂ ವಸ್ತುವಿನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವುಗಳನ್ನು ಆ ವಸ್ತುವು ಹೀರುವುದರಿಂದ ಹಾಗೂ ಅದರ ಪ್ರತಿಫಲನದಿಂದ ಉಂಟಾಗುವ ಕಿರಣಗಳು ನಮ್ಮ ಕಣ್ಣಿನ ಮೇಲೆ ಬೀಳುವುದರಿಂದ. ಈ ಪ್ರಕ್ರಿಯೆಯಲ್ಲಿ ನಮ್ಮ ಅಕ್ಷಿಪಟಲದ ಮೇಲೆ ಬೀಳುವ ಬೆಳಕಿನ ಶಕ್ತಿಯು ಅಲ್ಪ ಪ್ರಮಾಣದ್ದಾಗಿರುತ್ತದೆ. ಆದರೆ ವಿದ್ಯುನ್ಮಾನ (electronic) ಪರದೆಗಳನ್ನು ವೀಕ್ಷಿಸುವಾಗ ಈ ಕಿರಣಗಳು ನೇರವಾಗಿ ಅಕ್ಷಿಪಟಲದ ಮೇಲೆ ಬೀಳುವುದರಿಂದ ಹೆಚ್ಚು ಪ್ರಮಾಣದ ಶಕ್ತಿಪಾತ ಕಣ್ಣಿನ ಮೇಲಾಗುತ್ತದೆ. ಇದು ಟಾರ್ಚನ್ನೋ, ವಿದ್ಯುತ್ ಬಲ್ಬುಗಳನ್ನೋ, ಸೂರ್ಯ ಗ್ರಹಣವನ್ನೋ ನೇರವಾಗಿ ವೀಕ್ಷಿಸುವುದಕ್ಕೆ ಸಮಾನ! ಅಲ್ಲದೆ ಹಲವು ಉಪಯೋಗಗಳ ಸಂದರ್ಭದಲ್ಲಿ ಮೊಬೈಲ್ ಪರದೆಗಳನ್ನು ನಿರಂತರವಾಗಿ ದಿಟ್ಟಿಸಿ ನೋಡುವುದೂ ಕಣ್ಣಿಗೆ ಹಾನಿಕಾರಕವಾಗಿದೆ. ಚಲಿಸುತ್ತಿರುವ ವಾಹನಗಳಲ್ಲಿನ ಸ್ಮಾರ್ಟ್ ಫೋನ್ ಬಳಕೆ ಕೂಡ ದೃಷ್ಟಿದೋಷಕ್ಕೆ ಕಾರಣವಾಗುತ್ತದೆ. ಫೋನಿನಲ್ಲಿ ಚಲನಚಿತ್ರ ವೀಕ್ಷಣೆ ಕಣ್ಣು ಹಾಗೂ ಕಿವಿ ಎರಡಕ್ಕೂ ಹಾನಿಕಾರಕ. ಹಾಗಾಗಿ ಚಾಳೀಸು ಬರಲು ಇನ್ನು ೪೦ ವರ್ಷ ಕಾಯಬೇಕಿಲ್ಲ!
ಗಣಕಯಂತ್ರದ ದೀರ್ಘಕಾಲೀನ ಬಳಕೆಯಿಂದ ಕಣ್ಣಿಗೆ ಉಂಟಾಗುವ ಖಾಯಿಲೆಗೆ computer vision syndrome ಎನ್ನಲಾಗುತ್ತದೆ. ಕಣ್ಣಿನ ಉರಿ, ಕೆಂಪಾಗುವಿಕೆ, ದೃಶ್ಯಗಳು ಮಂಜಾಗಿ ಕಾಣುವುದು ಅಥವಾ ಎರಡಾಗಿ ಕಾಣುವುದು ಮತ್ತು ತಲೆ ನೋವು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಎಡೆಬಿಡದೆ ನಿರಂತರವಾಗಿ LCD ಪರದೆ (TV, ಗಣಕಯಂತ್ರ ಅಥವಾ ಮೊಬೈಲ್ ನದ್ದಾಗಿರಬಹುದು) ಯನ್ನು ನೋಡುವುದರಿಂದ ಕಣ್ರೆಪ್ಪೆಯನ್ನು ಬಡಿಯುವ ಗತಿ ನಿಧಾನವಾಗುತ್ತದೆ. ಇದರಿಂದ ಕಣ್ಣಿನ ಹೊರಭಾಗದ ದ್ರವ ಆರಿಹೋಗಿ ಈ ಮೇಲಿನ ರೋಗ ಲಕ್ಷಣಗಳು ಕಾಣಿಸುತ್ತವೆ. ಹವಾನಿಯಂತ್ರಿತ ಸ್ಥಳಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚು. ಅಲ್ಲದೆ LCD ಪರದೆಗಳ resolution ಹೆಚ್ಚಿದಷ್ಟು ಚಿತ್ರಗಳಲ್ಲಿನ ಹೆಚ್ಚಿನ ವಿವರಗಳನ್ನು ತೋರಿಸುವ ಭರದಲ್ಲಿ ಕಣ್ಣಿನ ನರಗಳ ಮೇಲೆ ಅಧಿಕ ಒತ್ತಡ ಉಂಟುಮಾಡುತ್ತವೆ. ಇದು ಗ್ಲಕೋಮದಂತಹ ಕಣ್ಣಿನ ಖಾಯಿಲೆಯ ಸಮೀಪಕ್ಕೆ ನಮ್ಮನ್ನು ಕೊಂಡೊಯ್ಯಬಹುದು!
೪. ಕಿವಿಯ ಮೇಲಿನ ದುಷ್ಪರಿಣಾಮಗಳು
ಕಿವಿಯ ಸ್ವಾಭಾವಿಕ ಕೇಳುವ ಕೇಳುವ ವಿಧಾನ ಹೀಗಿದೆ. ಶಬ್ದ ತರಂಗಗಳು ಕಿವಿಯ ಹಾಲೆಯ ಮೇಲೆ ಬಿದ್ದು, ಹಾಲೆಯು ಆ ತರಂಗಗಳನ್ನು ಕಿವಿಯ ಒಳಕ್ಕೆ ತಲುಪುವಂತೆ ಮಾಡಿ ಅದನ್ನು ಗ್ರಹಿಸಲು ಸಹಕರಿಸುತ್ತದೆ. ಅಧುನಿಕ ವಿಜ್ಞಾನ ಇದನ್ನು ಒಪ್ಪದಿದ್ದರೂ ಕೂಡ ಕೆಲವು ಪ್ರಾಣಿಗಳನ್ನು ನೋಡಿದಾಗ ಈ ವಿಷಯ ಸ್ಪಷ್ಟವಾಗುತ್ತದೆ. ಉದಾಹರಣೆಗೆ ಜಿಂಕೆ, ಹಸು ಮುಂತಾದ ಪ್ರಾಣಿಗಳು ತಮ್ಮ ಕಿವಿಯ ಹಾಲೆಯನ್ನು ಶಬ್ಧದ ದಿಕ್ಕಿಗೆ ತಿರುಗಿಸಿ ಅದನ್ನು ಆಲಿಸುತ್ತವೆ. ಇಂತಹ ಸ್ವಾಭಾವಿಕ ಕೇಳುವ ವಿಧಾನಕ್ಕೆ ವಿಪರೀತವಾಗಿ ಇಂದು ನಾವು ಸ್ಮಾರ್ಟ್ ಫೋನ್ ನಿಂದ ಹಾಡುಗಳನ್ನು ಕೇಳುವ ಭರದಲ್ಲಿ ಕಿವಿಯ ಒಳಗಡೆ ಸಾಧನವನ್ನು ತುರುಕಿಸಿ ಕಿವಿಗೆ ಕೇಳುವಂತೆ ಬಲವಂತ ಪಡಿಸುತ್ತಿದ್ದೇವೆ. ಅಷ್ಟಕ್ಕೂ ಈ ಹಾಡುಗಳನ್ನು ವಿಚಿತ್ರ ಸಂಯೋಜನೆಗಳ ಮೂಲಕ ರಚಿಸಿರುತ್ತಾರೆ. ಇವು ತಕ್ಷಣದ ಉನ್ಮಾದವನ್ನು ಬಿಟ್ಟರೆ ಬೇರೇನನ್ನೂ ನೀಡಲಾರವು. ನೆನಪಿರಲಿ ಉತ್ತಮವಾದ ಸಂಗೀತಕ್ಕೆ ಅದ್ಭುತವಾದ ಸಾಮರ್ಥ್ಯವಿದೆ. ಇಂತಹ ಸಂಗೀತ ಮನುಷ್ಯನ ವೈಖರಿಯಿಂದ ಹೊರಡಬೇಕೆ ವಿನಃ ಧ್ವನಿವರ್ಧಕಕ್ಕೆ ಈ ಶಕ್ತಿ ಇಲ್ಲ. ಇಂತಹ ಕರ್ಕಶವಾದ ಹಾಡುಗಳನ್ನು ಆಲಿಸಲು ಎಲ್ಲೆಂದರಲ್ಲಿ ಕಿವಿಗೆ earphone ಸಿಕ್ಕಿಸಿಕೊಂಡು ತಿರುಗುತ್ತಿರುವವರು ಇನ್ನು ೧೫-೨೦ ವರ್ಷಗಳ ನಂತರ ಶ್ರವಣ ಸಾಧನ (hearing aid) ಹಾಕಿಕೊಂಡು ತಿರುಗುವಂತಾದರೆ ಆಶ್ಚರ್ಯವೇನಿಲ್ಲ!
ಸ್ಮಾರ್ಟ್ ಫೋನ್ ನ ಇನ್ನಿತರ ಅಡ್ಡ ಪರಿಣಾಮಗಳಲ್ಲಿ ಪ್ರಮುಖವಾದದ್ದು ಅದರಲ್ಲಿ ಆಡಬಹುದಾದ ಆಟಗಳು. ಇವು ಮನುಷ್ಯನ ಅಮೂಲ್ಯ ಸಮಯವನ್ನು ತಿನ್ನುವುದಲ್ಲದೆ ಕ್ರಮೇಣ ಚಟಕ್ಕೆ ಕಾರಣವಾಗಬಹುದು. ಮಕ್ಕಳು ಕ್ರಮೇಣವಾಗಿ ವ್ಯಾಯಾಮವನ್ನು ನೀಡುವ ಆಟೋಟಗಳಿಂದ ವಿಮುಖರಾಗುತ್ತಿದ್ದಾರೆ. ಇದು ಅವರ ಬೌದ್ಧಿಕ ಹಾಗೂ ಮಾನಸಿಕ ವಿಕಾಸಕ್ಕೆ ಮಾರಕವಾಗಿದೆ. ವಸ್ತುಗಳ ಮೇಲೆ ಗಮನ ಕೇಂದ್ರಿಕರಿಸುವಲ್ಲಿ ಹಾಗೂ ವಿಷಯಗಳ ಬಗ್ಗೆ ಏಕಾಗ್ರತೆ ಹೊಂದುವಲ್ಲಿ ಸೋಲುತ್ತಿದ್ದಾರೆ. ಒಟ್ಟಿನಲ್ಲಿ ಸ್ಮಾರ್ಟ್ ಫೋನಿನ ಅತಿಯಾದ ವ್ಯಾಮೋಹ ಹಾಗೂ ಅವಲಂಬನೆ ಒಂದು ಚಟವಾಗಿ ಪರಿವರ್ತನೆಗೊಂಡು ದುರ್ವ್ಯಸನವಾಗಿ ಬೆಳೆಯುತ್ತಿರುವುದು ನಮ್ಮ ಸಮಾಜದ ದುರಂತ. ಕೆಲವೇ ವರ್ಷಗಳಲ್ಲಿ ಇದಕ್ಕೆಂದೇ ವಿಶೇಷ ಮಾನಸಿಕ ಚಿಕಿತ್ಸಾಲಯಗಳನ್ನು ತೆರೆಯಬೇಕಾಗಿ ಬರಬಹುದು. ಸದಾ ಒಳ್ಳೆಯದನ್ನೇ - ಸ್ವಾಭಾವಿಕವಾದುದನ್ನೇ ನೋಡಬಯಸುವ ಕಣ್ಣುಗಳಿಗೆ, ನೈಸರ್ಗಿಕ ಧ್ವನಿಗಳನ್ನೇ ಆಲಿಸಬಯಸುವ ಕಿವಿಗಳಿಗೆ, ದುಡಿದು ಹೊಟ್ಟೆಹೊರೆದುಕೊಳ್ಳಲೆಂದೇ ನಿರ್ಮಿತವಾದ ಕೈಗಳಿಗೆ ಸ್ಮಾರ್ಟ್ ಫೋನಿನ ವಿಪರೀತ ಬಳಕೆಯ ಮೂಲಕ ಹಿಂಸೆ ನೀಡುವುದು ನ್ಯಾಯವೇ? ದಯವಿಟ್ಟು ಯೋಚಿಸಿ. ಇಷ್ಟೇ ಅಲ್ಲದೆ ಮೊಬೈಲ್ ಫೋನಿನ ತರಂಗಗಳಿಂದ ಉಂಟಾಗುವ ಮೆದುಳಿನ ಗಡ್ಡೆ, ಕ್ಯಾನ್ಸರ್ ಇತ್ಯಾದಿ ಸಂಭವನೀಯತೆಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿಲ್ಲ. ಇದನ್ನು ಪ್ರಮಾಣೀಕರಿಸುವ ಅನೇಕ ಸಂಶೋಧನಾ ಲೇಖನಗಳು ಈಗಾಗಲೇ ಪ್ರಕಟಗೊಂಡಿವೆ.
ಕೊನೆಯ ಮಾತು : ಇತ್ತೀಚಿಗೆ ಹತ್ತಿರದ ಇಂಜಿನಿಯರಿಂಗ್ ಕಾಲೇಜಿಗೆ ಆಹ್ವಾನಿತ ಉಪನ್ಯಾಸಕನಾಗಿ ಹೋದಾಗ "ಸ್ಮಾರ್ಟ್ ಫೋನ್ "ಗಳ ಕುರಿತು ಆಡಿದ ಮಾತುಗಳು ನೆನಪಿಗೆ ಬರುತ್ತಿವೆ. "ಸ್ಮಾರ್ಟ್ ಫೋನ್ " ಹೊಂದಿರದ ನಾನು ಅಂದು ವಿದ್ಯಾರ್ಥಿಗಳಿಗೆ ಹೇಳಿದ್ದೆ, "ನನ್ನ ಫೋನ್ ಸ್ಮಾರ್ಟ್ ಅಲ್ಲ, ಏಕೆಂದರೆ ನಾನು ಸ್ಮಾರ್ಟ್!!"
March 5, 2015
ಹಿಂದೂ ಧರ್ಮವೇ ಅಥವಾ ಭಾರತ ಧರ್ಮವೇ ?
||ಶ್ರೀ ಗುರುಭ್ಯೋ ನಮಃ||
ನಾವೇಕೆ
"ಹಿಂದೂ"
ಎಂಬ
ಪದದ
ಬಗ್ಗೆ
ಅಷ್ಟೊಂದು ಮೋಹಿತರಾಗಿದ್ದೇವೆಯೋ ಗೊತ್ತಿಲ್ಲ ! ಪಾಶ್ಚಿಮಾತ್ಯರು ಸಿಂಧೂ
ನದಿಯ
ದಿಕ್ಕಿನಿಂದ ಭಾರತವನ್ನು ಪ್ರವೇಶಿಸಿದುದರಿಂದ ಅಲ್ಲದೆ
ಅವರಿಗೆ
ಸಿಂಧು
ಎಂದು
ಉಚ್ಚರಿಸಲು ಬರದೆ
ಇದ್ದುದರಿಂದ "ಹಿಂದೂ" ಎಂಬ ಪದದ
ಜನನವಾಯಿತು. ಆಮೇಲೆ
ಇಂಡಸ್
ಆಗಿ,
ಕೇವಲ
ಕ್ರಿ.
ಶ.
೯
ರಿಂದ
ಈಚೆಗೆ
ಇಂಡಿಯಾ
ಆಗಿದೆ.
ಸಂಸ್ಕೃತದಲ್ಲಿ "ಭಾರತ" ಅಥವಾ "ಭರತ ವರ್ಷ"
ಎಂದು
ಪ್ರಾಕ್ತನ ಕಾಲದಿಂದಲೂ ಪ್ರಸಿದ್ದವಾಗಿರುವ ಈ
ದೇಶ
ಬ್ರಿಟಿಷರ ಓಡೆದು
ಆಳುವ
ನೀತಿಯ
ಫಲವಾಗಿ
ಹಿಂದುಸ್ತಾನವಾಯಿತು. ಹೀಗಿರುವಾಗ ಈ
ದೇಶದಲ್ಲಿರುವವರನ್ನು "ಹಿಂದೂ" ಎಂದು ಕರೆಯಲು
ಹೇಗೆ
ಸಾಧ್ಯ?
ಅವರು
ಆಚರಿಸುವ ಧರ್ಮ
ಹಿಂದೂ
ಧರ್ಮವಾಗಲು ಹೇಗೆ
ಸಾಧ್ಯ?
ಹಾಗಿದ್ದರೆ ಕೋಟ್ಯಾಂತರ ವರ್ಷಗಳಿಂದ ಉಳಿದು
ಬೆಳೆದಿರುವ ಸನಾತನ
ಧರ್ಮವು
ಕೇವಲ
೩೦೦-೪೦೦ ವರ್ಷಗಳ ಹಿಂದೆ
ಬಳಕೆಗೆ
ಬಂದ
ಶಬ್ಧದಿಂದ ಗುರುತಿಸಲ್ಪಡಬೇಕೇ? ವಿದೇಶೀ
ಆಕ್ರಮಣಕಾರರು ಸಿಂಧೂ
ನದಿಯ
ದಿಕ್ಕಿನ ಬದಲು
ಪೂರ್ವದಿಂದ ಭಾರತವನ್ನು ಪ್ರವೇಶಿಸಿದ್ದರೆ ನಾವು
"ಬ್ರಹ್ಮಪುತ್ರರೂ", ನಮ್ಮ ದೇಶವು
"ಬ್ರಹ್ಮಸ್ಥಾನ"ವೂ
ಆಗಿರುತ್ತಿತ್ತಲ್ಲವೇ!
ಹೆಚ್ಚಿನ ಬುದ್ಧಿ
ಜೀವಿಗಳಿಗೆ "ಹಿಂದೂ" ಹಾಗೂ "ಹಿಂದೂ ಧರ್ಮ"
ಎಂಬ
ಪದಗಳ
ಬಗ್ಗೆ
ಅಲರ್ಜಿ
ಇದೆ.
ಅದ್ದರಿಂದ ಭಾರತದಲ್ಲಿರುವ ಸನಾತನ
ಧರ್ಮಕ್ಕೆ "ಭಾರತ ಧರ್ಮ"
ಎಂಬ
ಪದವೇ
ಹೆಚ್ಚು
ಸೂಕ್ತವಾಗಿ ಕಾಣುತ್ತದೆ. ಭಾರತದಲ್ಲಿರುವವರು ಭಾರತೀಯರು ಹಾಗೂ
ಭಾರತ
ಧರ್ಮೀಯರು. ಈ
ದೇಶದಲ್ಲಿ ಹಲವಾರು
ಧರ್ಮಗಳು ಹುಟ್ಟಿ
ಬೆಳೆದಿವೆಯಾದರೂ ಪ್ರಸಕ್ತ ಇರುವ
ಬೌದ್ಧ,
ಜೈನ,
ಸಿಕ್ಖ,
ವೀರಶೈವರು ತಮ್ಮನ್ನು ಭಾರತ
ಧರ್ಮದಿಂದ ಹೊರಗಿನವರೆಂದು ಭಾವಿಸಿಲ್ಲ, ಅಲ್ಲದೆ
ಹಾಗೆ
ನಡೆದುಕೊಂಡೂ ಇಲ್ಲ.
ಅವಿಭಜಿತ ದಕ್ಷಿಣ
ಕನ್ನಡ
ಜಿಲ್ಲೆಯಲ್ಲಿ ನಡೆಯುವ
"ವಿರಾಟ್
ಹಿಂದೂ
ಸಮಾವೇಶ"
ಗಳ
ಸಂಚಾಲಕರು ಓರ್ವ
ಜೈನರು
ಎನ್ನುವುದು ಇದಕ್ಕೆ
ಪುಷ್ಟಿ
ನೀಡುತ್ತದೆ. ನಮ್ಮ
ಸನಾತನ
ಭಾರತ
ಧರ್ಮವು
ಎಲ್ಲ
ಧರ್ಮಗಳನ್ನೂ ಪೋಷಿಸಿಕೊಂಡುಬಂದಿರುವುದೇ ಇದಕ್ಕೆ
ಕಾರಣ.
ನಮ್ಮ
ಸನಾತನ
ಭಾರತ
ಧರ್ಮ
ಪ್ರತಿಪಾದಿಸುವ ವೇದಗಳು,
ಉಪನಿಷತ್ತುಗಳು, ಪುರಾಣಗಳು, ಭಗವದ್ಗೀತೆ ಇತ್ಯಾದಿ ಪವಿತ್ರ
ಗ್ರಂಥಗಳು ಕೇವಲ
ಭಾರತೀಯರಿಗೆ ಮಾತ್ರ
ಮಾರ್ಗದರ್ಶಕವಾಗಿರದೆ ಸಮಸ್ತ
ವಿಶ್ವಕ್ಕೆ ದಾರಿದೀಪವಾಗಿವೆ. ಅದಕ್ಕಾಗಿಯೇ 'ವಸುಧೈವ
ಕುಟುಂಬಕಂ' (ಈ
ಭೂಮಿಯಲ್ಲಿರುವವರೆಲ್ಲ ಒಂದೇ
ಕುಟುಂಬಕ್ಕೆ ಸೇರಿದವರು) ನಂತಹ
ಉಕ್ತಿಗಳನ್ನು ಇದರಲ್ಲಿ ಕಾಣಬಹುದು.
ಸನಾತನ
ಭಾರತದಲ್ಲಿದ್ದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ,
ಶೂದ್ರ
ವರ್ಣಗಳನ್ನು ಕೆಲವರು
ಜಾತಿ
ಪದ್ಧತಿ
ಎಂದು
ಬೊಟ್ಟು
ಮಾಡಿ
ತೋರಿಸುತ್ತಾರೆ. ಅಲ್ಲದೆ
ಅದಕ್ಕೆ
ಪುರುಷ
ಸೂಕ್ತದ
ಆಧಾರವನ್ನು ನೀಡುತ್ತಾರೆ. ನಿಜವಾಗಲೂ ಇವರ್ಯಾರೂ ಸಂಸ್ಕ್ರತ ಪಂಡಿತರೂ ಅಲ್ಲ
ಅಥವಾ
ಬ್ರಾಹ್ಮೀ (ವೇದಗಳು
ಬರೆಯಲ್ಪಟ್ಟ ಭಾಷೆ)
ಯ
ಗಂಧಗಾಳಿ ತಿಳಿದವರೂ ಅಲ್ಲ.
ಪುರುಷ
ಸೂಕ್ತ
ಹೇಳುತ್ತದೆ , "ನಾವು ಯಾರನ್ನು ಪುರುಷ
(ಇದು
ಲಿಂಗ
ಸೂಚಕ
ಅಲ್ಲ,
ಮನುಷ್ಯ
ಎಂದರ್ಥ)
ನೆಂದು
ಕರೆಯುತ್ತೇವೆಯೋ ಆತನ
ಮುಖದಲ್ಲಿ ಜ್ಞಾನವಿದೆ (ಬ್ರಹ್ಮ
ಜ್ಞಾನ
ಅಂದರೆ
ಬ್ರಾಹ್ಮಣ), ಬಾಹುಗಳಲ್ಲಿ ಶೌರ್ಯವಿದೆ (ಕ್ಷತ್ರಿಯ), ಊರುವಿನ
ಭಾಗದಲ್ಲಿ ತನ್ನ
ವ್ಯವಹಾರಗಳನ್ನು ನಡೆಸುತ್ತಾನೆ (ವೈಶ್ಯ)
ಹಾಗೂ
ಪಾದಗಳ
ಸಹಾಯದಿಂದ ಕೆಲಸ
ಮಾಡಿಕೊಳ್ಳುತ್ತಾನೆ (ಶೂದ್ರ)"
ಎಂದು.
ಇದಕ್ಕೆ
ವಿಪರೀತ
ಅರ್ಥ
ಕಲ್ಪಿಸಿ ಭಾರತದಲ್ಲಿ ಹಲವಾರು
ಜಾತಿ,
ವರ್ಗಗಳನ್ನು ಸೃಷ್ಟಿಸಲಾಯಿತು. ನೀವೇ
ನೋಡಿ,
ಭಾರತದಲ್ಲಿ ಎಲ್ಲಾದರೂ ಕ್ಷತ್ರಿಯ ಎಂಬ
ಜಾತಿ
ಇದೆಯೇ
. ರಾಮನನ್ನೋ, ಸೋಮನನ್ನೋ ಸೇರಿಸಿಕೊಂಡು ಹೊಸ
ಕ್ಷತ್ರಿಯ ಪಂಗಡಗಳನ್ನು ಸೃಷ್ಟಿಮಾಡಿಕೊಂಡಿರಬಹುದು. ಆದರೆ
ದೇಶಕ್ಕಾಗಿ ಹೋರಾಡುವ ಎಲ್ಲರನ್ನೂ ಕರೆಯಲು
ನಮ್ಮಲ್ಲಿ ಕ್ಷತ್ರಿಯ ಎಂಬ
ಶಬ್ಧಕ್ಕಿಂತ ಉತ್ತಮ
ಅಕ್ಷರ
ಸಂಯೋಜನೆ ಸಿಗಲಾರದು. ಹಾಗೆಯೇ
ವ್ಯಾಪಾರಿಗಳಿಗೆ ವೈಶ್ಯರೆಂಬ ಅಭಿದಾನ
ಸೂಕ್ತ
ಎನ್ನಿಸಿದರೆ ಇನ್ನೊಬ್ಬರ ಕೈಕೆಳಗೆ ದುಡಿಯುವವರೆಲ್ಲರೂ ಶೂದ್ರರೆ (ನನ್ನನ್ನೂ ಸೇರಿಸಿ).
ಆದರೆ
ಇದಕ್ಕೆಲ್ಲ ಅಪವಾದ
ಎಂಬಂತೆ
ಇರುವ
ಶಬ್ಧ
"ಬ್ರಾಹ್ಮಣ". ಈ ಚತುರ್ವರ್ಣಗಳಲ್ಲಿ ಬ್ರಾಹ್ಮಣ ಎಂಬುದು
ಮಾತ್ರ
ಜಾತಿಯಾಗಿ ಉಳಿದುಕೊಂಡಿದೆ. ಇಂತಹ
ಪಂಗಡ
ಹೇಗೆ
ಹುಟ್ಟಿಕೊಂಡಿತು ಎಂಬುವುದೇ ಬಹಳ
ಕುತೂಹಲಕರ ವಿಷಯ.
ನಿಜವಾಗಿ ಬ್ರಾಹ್ಮಣನೆಂದರೆ, ಸತತ
ಅಧ್ಯಯನಗಳ ಮೂಲಕ
ಬ್ರಹ್ಮಜ್ಞಾನವನ್ನು ಸಂಪಾದಿಸಿ ಅದನ್ನು
ಲೋಕಕಲ್ಯಾಣಕ್ಕಾಗಿ ವ್ಯಯಿಸುವವನು ಎಂದರ್ಥ.
ಆದರೆ
ಇಂದು
ಬ್ರಾಹ್ಮಣ ಜಾತಿ
ಎಂದು
ಹೇಳಿಕೊಂಡು ಅವರ
ಸಂತಾನವೆಲ್ಲ ಬ್ರಾಹ್ಮಣ, ಅವರು
ಶ್ರೇಷ್ಠ ಎಂಬ
ಸುಳ್ಳುಗಳನ್ನೇ ಬೆಳೆಸಲಾಗುತ್ತಿದೆ. ಈ
ಜಾತಿಯಲ್ಲಿ ಹುಟ್ಟಿದ ಸೈನಿಕ,
ವ್ಯಾಪಾರೀ, ಕಾರಕೂನ
ಎಲ್ಲರೂ
ಬ್ರಾಹ್ಮಣರೇ!

ಇನ್ನು ಇತರ
ಜಾತಿಗಳ
ಉಗಮದ
ಬಗ್ಗೆ
ಕನ್ನಡ
ಸಾರಸ್ವತ ಲೋಕದ
ಅತ್ಯತ್ತಮ ಸಾಹಿತಿಯೋರ್ವರ ಅಭಿಪ್ರಾಯಗಳು ಹೀಗಿವೆ.
ಹಿಂದೆ
ರಾಜರ
ಆಳ್ವಿಕೆಯಲ್ಲಿ ಪ್ರತಿಯೊಂದು ಉದ್ಯೋಗ
ಮಾಡುವ
ಆಯಾ
ಜನರ
ಗುಂಪುಗಳೇ ಮುಂದೆ
ಜಾತಿ
- ವರ್ಗಗಳಾಗಿ ಮಾರ್ಪಾಡು ಹೊಂದಿದವು. ಉದಾಹರಣೆಗೆ ರಜಕ,
ಗೊಲ್ಲ,
ಅಕ್ಕಸಾಲಿ, ಚಮ್ಮಾರ,
ಕ್ಷೌರಿಕ, ಶ್ಯಾನುಭೋಗ, ಪೂಜಾರಿ,
ನೇಕಾರ,
ಬಡಗಿ,
ಬೆಸ್ತ,
ಬೇಡ
... ಇತ್ಯಾದಿ. ರಾಜ್ಯದ
ಪ್ರತಿಯೊಂದು ಕೆಲಸವನ್ನೂ ನಿರ್ದಿಷ್ಟ ಜನರ
ಗುಂಪುಗಳು ಮಾಡುತ್ತಿದ್ದ ಕಾರಣ
ಅಂತಹ
ವರ್ಗಗಳು ಆಯಾ
ಕೆಲಸದ
ಹೆಸರಿನಿಂದ ಕರೆಯಲ್ಪಟ್ಟವು. ಮುಂದೆ
ವಿವಾಹದ
ಸಂದರ್ಭದಲ್ಲಿ ಜನರು
ಆಯಾ
ವರ್ಗಗಳ
ವಧುವಿಗೇ ಹೆಚ್ಚಿನ ಆದ್ಯತೆಯನ್ನು ಕೊಡಲಾರಂಭಿಸಿದರು. ಇದಕ್ಕೆ
ಆಯಾ
ವರ್ಗಗಳ
ಕಾರ್ಯ-ಕೌಶಲಗಳಲ್ಲಿನ ವ್ಯತ್ಯಾಸವೇ ಕಾರಣವಾಗಿತ್ತು. ಉದಾಹರಣೆಗೆ ಬೆಸ್ತರ ಮನೆಯಲ್ಲಿ ಬೇಡರ
ಹುಡುಗಿ
ಯಾವ
ಉದ್ಯೋಗಕ್ಕೆ ಸಹಕಾರಿಯಾದಾಳು? ಹಾಗಾಗಿ
ಉದ್ಯೋಗ
ಪ್ರಧಾನ
ಸಮಾಜದಲ್ಲಿ ಇಂತಹ
ಅಂತರ್-ವರ್ಗೀಯ ಮದುವೆಗಳನ್ನು ಜನ
ಇಷ್ಟ
ಪಡದ
ಕಾರಣ
ಅವುಗಳೇ
ಮುಂದೆ
ಜಾತಿಗಳಾಗಿ ಪರಿವರ್ತನೆ ಹೊಂದಿರಬಹುದು. ಈ
ವಾದಕ್ಕೆ ಪುಷ್ಟಿ
ಎಂಬಂತೆ
ಇಂದಿನ
ಸಮಾಜದಲ್ಲಿ ಕೂಡ
ಉದ್ಯೋಗಸ್ಥ ಪುರುಷರು ತಮ್ಮ
ಮಾದರಿಯ
ಉದ್ಯೋಗ
ಮಾಡುವ
ಸ್ತ್ರೀಯರನ್ನು ಮದುವೆ
ಆಗಬಯಸುತ್ತಿರುವುದು! ಹಾಗಿದ್ದರೆ ಜಾತಿ
ಪದ್ಧತಿ
ಬೇಕೇ?
ಕತ್ತೆಗಳು ಕತ್ತೆ
ಜಾತಿಗೆ
ಸೇರಿದರೆ, ಮಂಗಗಳು
ಮಂಗನ
ಜಾತಿ,
ಹಾಗಿದ್ದ ಮೇಲೆ
ಮಾನವರೆಲ್ಲ "ಮಾನವ ಜಾತಿ"ಯವರಲ್ಲವೇ? ಮೊದಲು "ಭಾರತ ಧರ್ಮ"ವು
ಜಾತಿಗಳ
ಸಂಕೋಲೆಯಿಂದ ಮುಕ್ತವಾಗಬೇಕು. ಆಗ
ಮಾತ್ರ
ಪರಧರ್ಮೀಯರು ನಮ್ಮನ್ನು ಗೌರವಿಸಬಹುದು. ತಾವೂ
ಕೂಡ
ಭಾರತ
ಧರ್ಮೀಯರೆಂದು ಕರೆದುಕೊಳ್ಳಬಹುದು. ಇನ್ನು
ಇಸ್ಲಾಂ
ಧರ್ಮದವರು ದಿನವೂ
ಆಲಾಪಿಸುವ ಪ್ರಾರ್ಥನೆಗಳು ಸಾಮಗಾನ
ಆಧಾರಿತ,
ಬೈಬಲ್
ನ
ಬರವಣಿಗೆಗಳಿಗೆ ಶ್ರೀಮದ್ ಭಗವದ್ಗೀತೆಯೇ ಆಧಾರ.
ಇನ್ನು
ಸಮಸ್ತ
ಜಗತ್ತಿನ ಸಕಲ
ಜ್ಞಾನಗಳಿಗೂ ವೇದವೇ
ಆಧಾರ.
ಹಾಗಿದ್ದ ಮೇಲೆ
ಸಮಸ್ತ
ಮಾನವ
ಕುಲ
ಒಂದೇ
ಜಾತಿ
ಅಂತ
ಅನಿಸುವುದಿಲ್ಲವೇ?

ಸ್ನೇಹಿತರೇ, ನಾವೆಲ್ಲಾ ಒಂದೇ
ಆದಿ
ದಂಪತಿಗಳಿಗೆ (ಪ್ರಕೃತಿ + ಪುರುಷ)
ಹುಟ್ಟಿದ ಸಂತಾನಗಳು. ಖಂಡಿತವಾಗಲೂ ನಮ್ಮೆಲ್ಲರ ಸಾವಿರಾರು ಹಿಂದಿನ
ತಲೆಮಾರಿನವರು ಅಣ್ಣ-ತಮ್ಮಂದಿರಾಗಿದ್ದವರು.
ಹಾಗಾಗಿ
ಈ
ವಿಶ್ವದ
ಪ್ರತಿಯೊಬ್ಬರೂ ಪರಸ್ಪರ
ಸಂಬಂಧಿಕರೇ ಅಲ್ಲವೇ
.... ಯೋಚಿಸಿ.
ನಾವು
ಆಚರಿಸುವ ಧರ್ಮ,
ಪದ್ದತಿಗಳು ಬೇರೆ
ಬೇರೆ
ಇರಬಹುದು. ಅವು
ಕೇವಲ
ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿರಲಿ. ಮೊದಲು
ಮಾನವ
ಧರ್ಮವನ್ನು ಪಾಲಿಸಿ
ಮನುಷ್ಯರಾಗೋಣ. ಪ್ರಕೃತಿಯೊಂದಿಗೆ, ಅದಕ್ಕೆ
ಪೂರಕವಾಗಿ ಬದುಕನ್ನು ನಡೆಸೋಣ.
ವೇದದಲ್ಲಿ ಹೇಳಿರುವಂತೆ ಹೇಳಿರುವಂತೆ "ಕೃಣ್ವಂತೋ ವಿಶ್ವಮಾರ್ಯಂ" ಅಂದರೆ ವಿಶ್ವವನ್ನು ಸಮಸ್ತ
ಜೀವಿಗಳಿಗೂ ವಾಸಯೋಗ್ಯ ಉನ್ನತ
ಸ್ಥಾನವನ್ನಾಗಿ ಮಾಡೋಣ.
ಇನ್ನು
ಯಾರಾದರೂ ನಮ್ಮ
ಜಾತಿ-ಧರ್ಮದ ವಿಷಯ ಪ್ರಸ್ತಾಪ ಮಾಡಿದರೆ ನನ್ನದು
"ಮಾನವ ಜಾತಿ, ಭಾರತ ಧರ್ಮ" ಎಂದು ಎದೆ
ತಟ್ಟಿ
ಹೇಳಲು
ಸಾಧ್ಯವೇ? ದಯವಿಟ್ಟು ಚಿಂತಿಸಿ.
ಝಕೀರ್ ನಾಯಕ್ ಅವರ ಈ ವಿಡಿಯೋವನ್ನು ನೋಡಿ ...
ಝಕೀರ್ ನಾಯಕ್ ಅವರ ಈ ವಿಡಿಯೋವನ್ನು ನೋಡಿ ...
Subscribe to:
Posts (Atom)