January 12, 2016

ಮೂರ್ಖರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು - ಭಾಗ ೨


ಸ್ಮಾರ್ಟ್ ಫೋನ್ ಗಳ ದುಷ್ಪರಿಣಾಮದ ಬಗ್ಗೆ ಚಿಂತನೆಯಲ್ಲಿ ತೊಡಗಿದ್ದಾಗ ಬೆಳಕಿಗೆ ಬಂದ ಇನ್ನಷ್ಟು ವಿಷಯಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆಇತ್ತೀಚಿನ ದಿನಗಳಲ್ಲಿ "ಹೆಡ್ ಫೋನ್ " ಅಥವಾ "ಈಯರ್ ಫೋನ್" ಎನ್ನುವ ಸಂಗೀತ ಕೇಳುವ ಸಾಧನವನ್ನು ಕಿವಿಗೆ ತುರುಕಿಕೊಂಡು  ಎಲ್ಲೆಂದರಲ್ಲಿ ಅಡ್ಡಾಡುವ ಜನಗಳನ್ನು ಕಾಣಬಹುದು. ವಾಹನ ಚಲಾಯಿಸುತ್ತಿರುವಾಗ, ನಡೆಯುವಾಗ, ಕುಳಿತಾಗ, ನಿಂತಾಗ, ಅಷ್ಟೇ ಏಕೆ ಶೌಚಾಲಯಕ್ಕೆ ಹೋಗುವಾಗಲೂ ಸಂಗೀತ ವನ್ನು ಆಸ್ವಾದಿಸುವ ಜನರಿಗೆ ಕಡಿಮೆ ಇಲ್ಲ

ಮೊದಲಿಗೆ ಸಾಧನವು ಹೊರಡಿಸುವ ತರಂಗಗಳ ಬಗ್ಗೆ ತಿಳಿಯೋಣ. ತರಂಗಗಳು ಯಾವುದೇ ಚೈತನ್ಯವನ್ನು ಹೊಂದಿರುವುದಿಲ್ಲ. ಕೇವಲ ಮಾನವ ವೈಖರಿಯಿಂದ ನೇರವಾಗಿ ಹೊರಬರುವ ಧ್ವನಿ ತರಂಗಗಳು ಮಾತ್ರ ಚೈತನ್ಯಪೂರ್ಣವಾಗಿರಲು ಸಾಧ್ಯ! ಹಾಗಿದ್ದರೆ ಹೆಡ್ ಫೋನ್ ನಲ್ಲಿ ನಾವು ಕೇಳುವುದೇನು? ಅದು ಕೇವಲ ಶಬ್ದ ಅಥವಾ ಗದ್ದಲ (noise) ಮಾತ್ರ. ಶಬ್ದ ಅಥವಾ ಗದ್ದಲವು ಕಿವಿಯ ಒಳಗಿನ ಸೂಕ್ಷ್ಮ ಗ್ರಹಣ ಇಂದ್ರಿಯಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿವೆ. ಗ್ರಹಣ ಇಂದ್ರಿಯಗಳ ಪುನರುತ್ಪಾದನೆ ಅಸಾಧ್ಯವಾಗಿರುತ್ತದೆಆಶ್ಚರ್ಯಕರ ವಿಚಾರವೆಂದರೆಚೈತನ್ಯವನ್ನು ಪರಿವರ್ತಿಸಿ, ಸಂಸ್ಕರಿಸಿಸಾಗಿಸುವ ವಿಜ್ಞಾನ ಇನ್ನೂ ಅಭಿವೃದ್ಧಿಯಾಗಿಲ್ಲ!! ಇಂತಹ ಗದ್ದಲವನ್ನು ಪದೇ ಪದೇ ಕೇಳುವ ಮೂಲಕ ಶ್ರವಣೇಂದ್ರಿಯಗಳು ಅನುಭವಿಸುತ್ತಿರುವ ನೋವು ವರ್ಣಿಸಲಸಾಧ್ಯ. ಮಂದ ಶ್ರವಣಕಿವುಡು ಹಾಗೂ ಕಿವಿ ಸೋರುವಿಕೆಯಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚುತ್ತವೆ. ಒಬ್ಬರ ಹೆಡ್ ಫೋನ್ ಅನ್ನು ಇನ್ನೊಬ್ಬರು ಬಳಸುವುದರಿಂದ ಕಿವಿಯ ಸೋಂಕು ಉಂಟಾಗಬಹುದು. ಇನ್ನು ಕೆಲವು ಇಯರ್ ಫೋನ್ ಗಳನ್ನು ಕಿವಿಯ ನಾಲೆಯನ್ನು ನೇರವಾಗಿ ಸಂಪರ್ಕಿಸುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವಾಯುವಿನ ಸಂಚಾರ ಭಾದಿತಗೊಂಡು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಈಯರ್ ಫೋನಿನ ನಿರಂತರ ಬಳಕೆಯು ಪಾರ್ಶ್ವ ಹಾಗೂ ಒಳ ಕಿವಿಯ ನೋವಿಗೆ ಕಾರಣವಾಗುತ್ತದೆ. ಮನುಷ್ಯನ ಒಳಕಿವಿಯು ಮೆದುಳಿಗೆ ಬಲು ಸಮೀಪದಲ್ಲಿರುವುದರಿಂದ ಕಿವಿಯ ನೋವು ಹಾಗೂ ಸೋಂಕುಗಳು ಮಾರಕವಾಗಿ ಪರಿಣಮಿಸಬಹುದು. ಅಲ್ಲದೆ, ಈಯರ್ ಫೋನ್ ಗಳನ್ನು ಸಿಕ್ಕಿಸುವಾಗ ಉಂಟಾಗುವ ಒತ್ತಡದಿಂದಾಗಿ ಹೊರಕಿವಿಯ ಅಕ್ಕ ಪಕ್ಕದ ಮೂಳೆಗಳು ಕೂಡಾ ತೊಂದರೆ ಅನುಭವಿಸುತ್ತವೆಇನ್ನು ವಾಹನ ಚಾಲನೆಯ ಸಂದರ್ಭದಲ್ಲಿ  ಈಯರ್ ಫೋನ್ ಗಳ ಬಳಕೆಯಿಂದ ಆಗಿರುವ ಅಗಣಿತ ಅಫಘಾತಗಳನ್ನು ನೀವೆಲ್ಲ ಈಗಾಗಲೇ ನೋಡಿ ಇಲ್ಲವೇ ಓದಿ ತಿಳಿದಿರುತ್ತೀರಿ.  

ಸ್ಮಾರ್ಟ್ ಫೋನಿನ ಬಳಕೆಯಿಂದ ತಲೆನೋವು, ಕತ್ತುನೋವು, ಭುಜನೋವು ಹಾಗೂ ಬೆನ್ನುನೋವು ಬರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವುದು ವಿಚಾರ. ಈಗ ಇದಕ್ಕೆ ಕಾಸ್ಮೆಟಿಕ್ ಸಮಸ್ಯೆಯೂ ಸೇರಿಕೊಂಡಿರುವುದು ಆತಂಕಕಾರಿ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದಿನಕ್ಕೆ ಗಂಟೆಗೂ ಅಧಿಕ ಸಮಯವನ್ನು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಗಳಲ್ಲಿ ಕಳೆಯುವುದು ಸಾಮಾನ್ಯವೆನಿಸಿದೆ. ಇದರಿಂದ ಕುತ್ತಿಗೆಯ ತ್ವಚೆ, ಕಾಲರ್ ಬೋನ್ ಹಾಗೂ ಗಲ್ಲದ ತ್ವಚೆಯು ಜೋತಾಡುತ್ತದೆ. ಇದರ ಪರಿಣಾಮವಾಗಿ ಅಕಾಲಿಕವಾದ ಸುಕ್ಕುಗಳು ಉಂಟಾಗುತ್ತವೆಹಿಂದೆ ಇಳಿ ಪ್ರಾಯದಲ್ಲಿ ಜೋತಾಡುತ್ತಿದ್ದ ಮುಖದ ಚರ್ಮವು ಇಂದು ಮುವತ್ತರ ಹರೆಯದಲ್ಲೇ ಸಮಸ್ಯೆಯನ್ನೆದುರಿಸುತ್ತಿವೆ. ಮುಖದ ಸ್ನಾಯುಗಳ ಅನಿಯಂತ್ರಿತ ಚಲನೆಗಳೇ ಇದಕ್ಕೆ ಪ್ರಮುಖ ಕಾರಣ. ಉದಾಹರಣೆಗೆ, ಹೇಗೆ ಯಾವಾಗಲೂ ಮುಖ ಗಂಟಿಕ್ಕಿಕೊಂಡಿರುವುದರಿಂದ ಹಣೆಯಲ್ಲಿ ನೆರಿಗೆಗಳು ಮೂಡುವುದಕ್ಕೆ ಕಾರಣವಾಗುವುದೋ ಹಾಗೆಯೇ ನಿರಂತರವಾಗಿ ತಲೆ ಕೆಳಗೆಮಾಡಿಕೊಂಡು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಗಳಲ್ಲಿ ಮಗ್ನರಾಗಿರುವುದರಿಂದ ತ್ವಚೆಯಲ್ಲಿ ನೆರಿಗೆಗಳು ಉಂಟಾಗುತ್ತವೆ ಮತ್ತು ಜೋತಾಡಲಾರಂಭಿಸುತ್ತದೆ ಎಂದು ಚರ್ಮ ರೋಗ ತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ ಕುತ್ತಿಗೆಯನ್ನು ಬಗ್ಗಿಸಿ ನಿರಂತರವಾಗಿ ಕೆಳಗೆ ನೋಡುವುದರಿಂದ ಅದರ ಸ್ನಾಯುಗಳಿಗೆ ಆಯಾಸ ಉಂಟಾಗಿ ಮೃದು ಅಂಗಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದು ಕೂಡ ಅಕಾಲಿಕ ಸುಕ್ಕುಗಳಿಗೆ ಕಾರಣವಾಗುತ್ತದೆ. ಹೀಗಾಗಿ ಸೌಂದರ್ಯಪ್ರಜ್ಞೆಯುಳ್ಳ ಮಹಿಳೆಯರು ಸ್ಮಾರ್ಟ್ ಫೋನಿನಿಂದ ಆದಷ್ಟು ದೂರ ಇರುವುದು ಒಳಿತು
ನಾನು ಪ್ರಾಧ್ಯಾಪಕನಾಗಿ ಕೆಲಸ ಮಾಡುವ ಕಾಲೇಜಿನಲ್ಲಿ ಅತಿ ಹಚ್ಚು ವಿದ್ಯಾರ್ಥಿಗಳು "ಸ್ಮಾರ್ಟ್ ಫೋನ್" ದಾಸಾನುದಾಸರಾಗಿದ್ದಾರೆ. ಅವರಲ್ಲಿನ ಬದಲಾವಣೆಗಳನ್ನು ಆಗಾಗ ಗಮನಿಸುತ್ತಿರುವುದು ನನ್ನ ಹವ್ಯಾಸಗಳಲ್ಲೊಂದು. ವರ್ಷ ಕಳೆದಂತೆ ವಿಧ್ಯಾರ್ಥಿಗಳ ಗೃಹಣ ಶಕ್ತಿ ಕುಂಟಿತಗೊಳ್ಳುತ್ತಿದೆ ಎಂಬ ಆಘಾತಕಾರೀ ಅಂಶ ನಾನು ಮತ್ತು ನನ್ನ ಸಹೋದ್ಯೋಗಿಗಳ ಗಮನಕ್ಕೆ ಬಂದಿದೆ. ದಿನದ ಹೆಚ್ಚಿನ ಸಮಯ ಸ್ಮಾರ್ಟ್ ಫೋನ್ ನಲ್ಲಿ ಮುಳುಗಿರುವ ಅವರಿಗೆ ತರಗತಿಯಲ್ಲಿ ಒಂದು ಘಂಟೆ ಕಳೆಯುವುದು ಕಷ್ಟವಾಗುತ್ತಿದೆ. ಕ್ಷಣ ಕ್ಷಣಕ್ಕೂ ಬರುವ ವ್ಹಾಟ್ಸಪ್, ಫೇಸ್ ಬುಕ್ ಇತ್ಯಾದಿಗಳ  ಸಂದೇಶಗಳನ್ನು ನೋಡುವ, ಕೇಳುವ ತವಕ ಅವರ ಏಕಾಗ್ರತೆಗೆ ಕಂಟಕವಾಗಿ ಪರಿಣಮಿಸಿದೆ. ಅಷ್ಟೇ ಏಕೆ, ಈಗಾಗಲೇ ನನ್ನ ಕಾಲೇಜಿನ ಅರ್ಧಕ್ಕೂ ಹೆಚ್ಚಿನ ವಿಧ್ಯಾರ್ಥಿ ಸಮೂಹ ದೃಷ್ಟಿದೋಷಕ್ಕೆ ತುತ್ತಾಗಿ ಕನ್ನಡಕಧಾರಿಗಳಾಗಿದ್ದಾರೆ. ಇದು ಕೇವಲ ಸ್ಮಾರ್ಟ್ ಫೋನ್ ಬಳಕೆಯಿಂದ ಮಾತ್ರ ಅಲ್ಲದಿದ್ದರೂ,  ಕ್ಷಿಪ್ರಪ್ರಮಾಣದ ಬೆಳವಣಿಗೆಯಲ್ಲಿ ಸ್ಮಾರ್ಟ್ ಫೋನ್ ಪಾತ್ರವನ್ನು ಅಲ್ಲಗಳೆಯುವಂತಿಲ್ಲ
ಇನ್ನು ಜೆನ್ನಿ ಫ್ರೈ ಎನ್ನುವ ೧೫ ವರ್ಷದ ಬ್ರಿಟನ್ನಿನ ಶಾಲಾ ಬಾಲಕಿಯ ಕಥೆ ಕೇಳಿ. ಆಕೆ ಹೋಗುತ್ತಿದ್ದ ಶಾಲಾ ತರಗತಿಯ ಪಕ್ಕದಲ್ಲಿ ಒಂದು ನಿಸ್ತಂತು ಅಂತರ್ಜಾಲದ ಸಂಪರ್ಕ ಸಾಧನ (wireless internet router) ಕೆಲಸ ಮಾಡುತ್ತಿತ್ತು. ಸಾಧನದಿಂದ ಹೊರಡುವ ಕಿರಣಗಳ ಪ್ರಭಾವದಿಂದ ಆಕೆಯಲ್ಲಿ ಖಿನ್ನತೆ ಉಂಟಾಗಿ, ತನ್ಮೂಲಕ ಅದು ಆತ್ಮಹತ್ಯೆಯಲ್ಲಿ ಪರ್ಯವಸಾನಗೊಂಡಿತು. ಆದ್ದರಿಂದ ಮನೆಯಲ್ಲಿ ಇಂತಹ ನಿಸ್ತಂತು ಅಂತರ್ಜಾಲದ ಸಂಪರ್ಕವನ್ನುಪಡೆಯುವ ಮುಂಚೆ ಯೋಚಿಸುವುದೊಳಿತು.  ಅಲ್ಲದೆ ಇತ್ತೀಚಿನ ದಿನಗಳಲ್ಲಿ ಜನ ವಾಸ್ತವ್ಯ ಇರುವ ಕಟ್ಟಡದ ಮೇಲ್ಭಾಗದಲ್ಲಿ ಮೊಬೈಲ್ ಟವರ್ ಗಳನ್ನು ಹಾಕಲು ಜನ ಹಿಂದೇಟು ಹಾಕುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು.  
ಇತ್ತೀಚಿಗೆ ದಿನ ಪತ್ರಿಕೆಯಲ್ಲಿ ಬಂದ ಸುದ್ಧಿಯನ್ನು ಗಮನಿಸಿವ್ಹಾಟ್ಸಪ್ ನಲ್ಲಿ ಬಂದ ಸಂದೇಶವೊಂದರಿಂದಾಗಿ ಮೈಸೂರಿನ, ಅತ್ಯಂತ ಶಿಕ್ಷಿತ, ನವ ವಿವಾಹಿತ ಗಂಡ-ಹೆಂಡಿರ ನಡುವೆ ಕಲಹ ಏರ್ಪಟ್ಟು, ಅದು ಹೆಂಡತಿಯ ಆತ್ಮಹತ್ಯೆಯಲ್ಲಿ ಪರ್ಯವಸಾನ ಹೊಂದುತ್ತದೆ.  ಇದು "ಸ್ಮಾರ್ಟ್ ಫೋನ್" ದುರ್ಬಳಕೆಯ ಒಂದು ಮುಖವಾದರೆ, ಜಲಪಾತಗಳ ಬಳಿ "ಸೆಲ್ಫಿ" ತೆಗೆಯಲು ಹೋಗಿ ಸತ್ತವರ ಸಂಖ್ಯೆ ಅಷ್ಟಿಷ್ಟಲ್ಲ.    
ಅತಿಯಾದರೆ ಅಮೃತವೂ ವಿಷಗಂಡ-ಹೆಂಡಿರ ವೈಮನಸ್ಯಕ್ಕೆ ಕಾರಣವಾಗುವ, ಮಕ್ಕಳ ಬೆಳವಣಿಗೆಗೆ ಮಾರಕವಾದ ಹಾಗೂ ವಿಧ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾದುವ "ಸ್ಮಾರ್ಟ್ ಫೋನ್" ಗಳು ಬೇಕೆಇನ್ನೊಮ್ಮೆ  ಯೋಚಿಸಿ